ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಬಳ್ಳಾರಿ ರಸ್ತೆಯ ಎಸ್.ಆರ್.ವೇಬ್ರಿಡ್ಜ್ನ ಇಂಜಿನಿಯರಿಂಗ್ ಕಾಲೇಜು ಕಮಾನ್ ಮುಂಭಾಗದಲ್ಲಿ ಮಾತನಾಡುತ್ತಾ ಕುಳಿತಿದ್ದ ಮೂವರು ವ್ಯಕ್ತಿಗಳನ್ನು ಕುಡಿಯಲು ಹಣ ಕೇಳಿ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿ, ಪ್ರಾಣಭಯ ಉಂಟು ಮಾಡಿದ ಪ್ರಕರಣ ನಡೆದಿದೆ.
ಕಾಟಪ್ಪನಹಟ್ಟಿಯ ರವಿ, ಗಾಂಧಿನಗರದ ಶ್ರೀನಿವಾಸ್, ವೀರೇಶ್ ಮತ್ತು ಚಿತ್ತಯ್ಯ ಬುಧವಾರ ಸಂಜೆ ಮಾತನಾಡುತ್ತಾ ಕುಳಿತಿರುವಾಗ ಅಲ್ಲಿಗೆ ಬಂದ ಚಕ್ರವರ್ತಿ ಎಂಬ ಯುವಕ ಕುಡಿಯಲು ಹಣಕೊಡಿ ಎಂದು ಕೇಳಿದ್ದಾನೆ.
ನಮ್ಮಲ್ಲಿ ಹಣವಿಲ್ಲವೆಂದು ಹೇಳಿದ ಕೂಡಲೇ ಕೆರಳಿದ ಚಕ್ರವರ್ತಿ ಶ್ರೀನಿವಾಸ, ವೀರೇಶ್ ಮತ್ತು ಚಿತ್ತಯ್ಯ ಎಂಬುವವರ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾನೆ.
ಕೂಡಲೇ ರವಿ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಶ್ರೀನಿವಾಸ್ನನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರ ಮೇಲೆ ಹಲ್ಲೆ ನಡೆಸಿದ ಚಕ್ರವರ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಡಿವೈಎಸ್ಪಿ ಟಿ.ಬಿ.ರಾಜಣ್ಣ, ಠಾಣಾ ಇನ್ಸ್ಪೆಕ್ಟರ್ ರಾಜಫಕೃದ್ದೀನ್ದೇಸಾಯಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಪಿಎಸ್ಐ ಕೆ.ಸತೀಶ್ನಾಯ್ಕ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.