ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ರಾಮ ನಗರ ಜಿಲ್ಲೆಯ ಮಾಗಡಿ ತಾಲೂತಿನಲ್ಲಿ ನಡೆದಿದೆ. ಮೃತ ಯುವತಿಯರನ್ನು ಬೆಂಗಳೂರು ಮೂಲದ ರಾಘವಿ, ಮಧುಮಿತ ಹಾಗೂ ರಮ್ಯಾ ಎಂದು ಗುರುತಿಸಲಾಗಿದೆ.
ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಏಳು ಯುವತಿಯರು ಜಲಾಶಯ ವೀಕ್ಷಣೆಗೆಂದು ತೆರಳಿದ್ದರು. ಈ ವೇಳೆ ಓರ್ವ ಯುವತಿ ನೀರಿಗೆ ಬಿದ್ದಿದ್ದಳು. ಆಕೆಯನ್ನು ರಕ್ಷಿಸಲು ಯುವತಿಯರು ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ಮೂವರು ಯುವತಿಯರು ನೀರುಪಾಲಾಗಿದ್ದಾರೆ.
ಯುವಕನೋರ್ವ ನೀರಿನಲ್ಲಿ ಮುಳುಗಿದ್ದ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾನೆ. ಸದ್ಯ ಮೃತ ಯುವತಿಯರ ದೇಹಗಳನ್ನು ಪೊಲೀಸರು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.