ಜೂ.20ಕ್ಕೆ ‘ಥಗ್‌ ಲೈಫ್‌ ವಿಚಾರಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಮಲ್‌ ಹಾಸನ್‌ ನಟಿಸಿರುವ
ಥಗ್‌ ಲೈಫ್‌ಚಲನಚಿತ್ರ ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಭದ್ರತೆ ನೀಡುವಂತೆ ಕೋರಿ ಚಿತ್ರದ ಸಹ ನಿರ್ಮಾಪಕ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಇದೇ ತಿಂಗಳ ಜೂ.20ಕ್ಕೆ ನಿಗದಿಪಡಿಸಿ ಮುಂದೂಡಿದೆ.

- Advertisement - 

ಕನ್ನಡ ಭಾಷೆ ತಮಿಳು ಭಾಷೆಯಿಂದ ಜನ್ಮತಾಳಿದೆ ಎಂಬುದಾಗಿ ನಟ ಕಮಲ್‌ ಹಾಸನ್‌ ವಿವಾದಾತ್ಮ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಥಗ್‌ ಲೈಫ್‌ಚಿತ್ರ ಪ್ರದರ್ಶನಕ್ಕೆ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು. ಅಲ್ಲದೇ, ಕನ್ನಡ ಸಾಹಿತ್ಯ ಪರಿಷತ್‌ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು. ಅಲ್ಲದೇ, ವಿವೇಚನೆ ಬಳಸುವಂತೆ ನ್ಯಾಯಪೀಠ ಮತ್ತೊಮ್ಮೆ ಸಲಹೆ ನೀಡಿತು.

- Advertisement - 

ಕ್ಷಮೆಯಾಚಿಸಿಲ್ಲವೇ?: ಗುರುವಾರ ನ್ಯಾಯಾಲಯದ ಕಲಾಪ ಪ್ರಾರಂಭವಾಗುತ್ತಿದ್ದಂತೆ ಕಸಾಪ ಪರ ವಕೀಲರು ವಾದ ಮಂಡಿಸಿದರು.
ಈ ವೇಳೆ ನ್ಯಾಯಪೀಠ ಈವರೆಗೂ ಕ್ಷಮೆಯಾಚನೆ ಮಾಡಲಿಲ್ಲವೇ ಎಂದು ಪ್ರಶ್ನಿಸಿತು. ಇದಕ್ಕೆ ವಕೀಲರು ಇಲ್ಲ ಎಂದು ತಿಳಿಸಿದರು.

ವಾದ ಮುಂದುವರೆಸಿದ ವಕೀಲರು, ಅರ್ಜಿದಾರರು ಪಾಲುದಾರಿಕೆ ಸಂಸ್ಥೆಯಾಗಿದೆ. ಕಂಪನಿಗಳುನ್ನು ನಾಗರಿಕರಲ್ಲ ಎಂಬುದಾಗಿ ಸಂವಿಧಾನದಲಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದರೂ, ಅರ್ಜಿದಾರರು ಸಂವಿಧಾನದ ಪರಿಚ್ಚೇದ 19(1)(ಜಿ) ಅಡಿಯಲ್ಲಿ ದೇಶದ ಯಾವುದೇ ಭಾಗದಲ್ಲಿ ವ್ಯವಹಾರ ನಡೆಸಬಹುದು ಎಂಬುದರ ಆಧಾರದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಗೆ ಅರ್ಹವಿಲ್ಲ. ಅಲ್ಲದೇ, ಮೊದಲು ಗೊಂದಲ ಸೃಷ್ಟಿಸಿ ಬಳಿಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ನಡೆ ಕಾನೂನು ದುರ್ಬಳಕೆ ಮತ್ತು ನ್ಯಾಯಾಲಯದ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುವ ಪ್ರಕ್ರಿಯೆಯಾಗಲಿದೆ. ಹೀಗಾಗಿ ಅರ್ಜಿಯನ್ನು ನೇರವಾಗಿ ವಜಾಗೊಳಿಸಬಹುದು ಎಂದು ಪೀಠಕ್ಕೆ ತಿಳಿಸಿದರು.

- Advertisement - 

ಕನ್ನಡಕ್ಕಿರುವ ಇತಿಹಾಸದ ಬಗ್ಗೆ ಉಲ್ಲೇಖಿಸಿದ ಕಸಾಪ ವಕೀಲರು: ಕನ್ನಡ ಮತ್ತು ಕರ್ನಾಟಕ ಕುರಿತಂತೆ ಮಹಾಭಾರತ, ಸ್ಕಂದ ಪುರಾಣ, ಶೂದ್ರಕನ ಮೃಚ್ಛಕಟಿಕ ಹಾಗೂ ಪ್ರಾಕೃತ ಭಾಷೆಗಳಲ್ಲಿಯೂ ಉಲ್ಲೇಖವಿದೆ. ಹೀಗಾಗಿ ಕನ್ನಡಕ್ಕೆ ಅನೇಕ ವರ್ಷಗಳ ಇತಿಹಾಸವಿರುವುದಾಗಿ ಪೀಠಕ್ಕೆ ತಿಳಿಸಿದರು.

ಅಲ್ಲದೆ, ಬಸವಣ್ಣನವರ ವಚನವನ್ನು ಪ್ರಸ್ತಾಪಿಸಿದ ಕಸಾಪ ವಕೀಲರು, ಮನೆಯೊಳಗಣ ಕಿಚ್ಚು ಮನೆಯನ್ನು ಸುಡುವುದಲ್ಲದೇ ನೆರಮನೆಯ ಸುಡುವುದೇ ಕೂಡಲಸಂಗಮದೇವಾ ಎಂದು ತಿಳಿಸಿದ ಅವರು, ಮೊದಲು ಬೆಂಕಿ ಹಚ್ಚಿ ಮತ್ತೆ ನ್ಯಾಯಾಲಯಕ್ಕೆ ಬಂದಿದ್ದಾರೆ ಎಂದರು.ಅಲ್ಲದೆ, ದೇಶದ ಎಲ್ಲ ಭಾಗಗಳೂ, ಭಾಷೆಗಳಿಗೂ ಸಮಾನ ಸ್ಥಾನಮಾನ ಇದೆ. ಆದರೆ, ನಟ ಕಮಲ್‌ ಹಾಸನ್‌, ಮೂರ್ಖತನದ ಹೇಳಿಕೆ ನೀಡಿದ್ದಾರೆ.

ವಿವಾದವನ್ನು ಸೃಷ್ಟಿ ಮಾಡಿ ಗೊಂದಲ ಮೂಡಿಸಿದ ಬಳಿಕ ನ್ಯಾಯಾಲಯಕ್ಕೆ ಬಂದಿದ್ದಾರೆ. ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ನ್ಯಾಯಪೀಠವೂ ಆ ರೀತಿಯ ಹೇಳಿಕೆ ಸರಿಯಲ್ಲ ಎಂದು ತಿಳಿಸಿತು. ಇದಕ್ಕೆ ವಕೀಲರು ವಿಷಾದ ವ್ಯಕ್ತಪಡಿಸಿದರು.

ಕಸಾಪ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಜೂನ್‌ 20ಕ್ಕೆ ಮುಂದೂಡಿತು.

ಥಗ್ ಲೈಫ್ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ನಿಷೇಧಿಸಿರುವ ಕ್ರಮ ಪ್ರಶ್ನಿಸಿ ಹಾಗೂ ಚಲನಚಿತ್ರ ಪ್ರದರ್ಶನಕ್ಕೆ ರಕ್ಷಣೆ ನೀಡಬೇಕು ಎಂದು ಕೋರಿ ಮಹೇಶ್ ರೆಡ್ಡಿ ಎಂಬವರು ಸಲ್ಲಿಸಿದ್ದ ಅರ್ಜಿಯ ಸಂಬಂಧ ಸುಪ್ರೀಂಕೋರ್ಟ್‌ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಚಲನ ಚಿತ್ರವಾಣಿಜ್ಯ ಮಂಡಳಿಗೆ ಶುಕ್ರವಾರ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

Share This Article
error: Content is protected !!
";