ಚಂದ್ರವಳ್ಳಿ ನ್ಯೂಸ್, ರಾಯಚೂರು:
ಹೃದಯಾಘಾತದಿಂದ ತಿಂಥಣಿ ಕಾಗಿನೆಲೆ ಪೀಠದ ಸಿದ್ದರಾಮಾನಂದಪುರಿ ಶ್ರೀಗಳು ಬ್ರಹ್ಮೈಕ್ಯರಾದ ಬೆನ್ನಲ್ಲೇ ಸ್ವಾಮೀಜಿಯವರ ಪೂರ್ವಾಶ್ರಮದ ತಾಯಿ ಮಹತ್ವದ ವಿಷಯ ಬಹಿರಂಗಪಡಿಸಿದ್ದಾರೆ.
ಪೂರ್ವಾಶ್ರಮದ ತಾಯಿ ಜಯಮ್ಮ ಅವರು ಶ್ರೀಗಳಿಗೆ ಎರಡು ಕಿಡ್ನಿ ವಿಫಲವಾದಾಗ ಕಣ್ಣೀರಿಟ್ಟಿದ್ದರು. ಸನ್ಯಾಸತ್ವ ಸ್ವೀಕರಿಸಿದ್ದ ಮಗನ ಜೀವ ಉಳಿಸಲು ತಮ್ಮ ಕಿಡ್ನಿಯನ್ನೇ ದಾನ ಮಾಡಿದ್ದರು.
ಜಯಮ್ಮ ಅವರ ಎಡಭಾಗದ ಕಿಡ್ನಿಯನ್ನು, ಶ್ರೀಗಳ ಬಲಭಾಗಕ್ಕೆ ಕಿಡ್ನಿ ಕಸಿ ಮಾಡಲಾಗಿತ್ತು. 7 ವರ್ಷದ ಹಿಂದೆ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂಬ ವಿಷಯ ತಿಳಿಸಿ ತಾಯಿ ಜಯಮ್ಮ ಅವರು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ಜರುಗಿತು.
ಪೂರ್ವಾಶ್ರಮದ ತಮ್ಮ ತಾಯಿ ಜಯಮ್ಮ ಅವರು ಕಿಡ್ನಿ ಕೊಡುತ್ತೇನೆ ಎಂದಾಗ ಶ್ರೀಗಳು ಬೇಡ ಎಂದಿದ್ದರು. ಬಳಿಕ ಸಿದ್ದರಾಮಯ್ಯನವರಿಂದ ಮನವೊಲಿಕೆ ಬಳಿಕ ಶ್ರೀಗಳು ಒಪ್ಪಿದ್ದರು ಎನ್ನಲುವ ಮಾಹಿತಿ ಕೂಡ ಹರಿದಾಡಿದೆ.

