ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸ್ಥಳೀಯ ಟಿಪ್ಪರ್ ಮಾಲೀಕರ ಸಂಘದ ಬೇಡಿಕೆ ಈಡೇರಿಕೆಗೆ ತಾಲ್ಲೂಕು ಆಡಳಿತ ಕೂಡಲೇ ಸ್ಪಂದಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಆರೋಪಿಸಿದರು.
ಅವರು, ಬುಧವಾರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ತಾಲ್ಲೂಕು ಟಿಪ್ಪರ್ ಮಾಲೀಕರ ಸಂಘದ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ತಾಲ್ಲೂಕು ಆಡಳಿತ ವಿಫಲವಾದ ಬಗ್ಗೆ ಆಸಮದಾನ ವ್ಯಕ್ತಪಡಿಸಿದರಲ್ಲದೆ, ಸರ್ಕಾರ ತಾರತಮ್ಯ ನೀತಿಯ ಬಗ್ಗೆಯೂ ಸಹ ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಟಿಪ್ಪರ್ ಮಾಲೀಕರು ತಮ್ಮ ನ್ಯಾಯುತವಾದ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡಿದ್ಧಾರೆ. ಅವರ ಬೇಡಿಕೆಯಲ್ಲಿ ಸತ್ಯಾಂಶವಿದೆ, ಹೆಚ್ಚಿನ ಪಾಲನ್ನು ಸ್ಥಳೀಯರಿಗೆ ನೀಡಬೇಕೆಂಬ ವಾದ ಒಪ್ಪುವಂತಹದ್ದು. ನಾನು ಸಹ ತಾಲ್ಲೂಕು ಆಡಳಿತವನ್ನು ಟಿಪ್ಪರ್ ಮಾಲೀಕರ ಸಂಘದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುತ್ತಾನೆಂದರು.
ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ನಮ್ಮ ಮನವಿಗೆ ಓಗೊಟ್ಟು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಆಗಮಿಸಿ ನಮ್ಮ ಸಮಸ್ಯೆಯನ್ನು ಅರಿತು ತಾಲ್ಲೂಕು ಆಡಳಿತವನ್ನು ಒತ್ತಾಯಪಡಿಸಿದ್ಧಾರೆ.
ಖಾಸಗಿ ಸ್ಟೀಲ್ ಫ್ಯಾಕ್ಟರಿಯ ೩೮೦೦ ಮೆಟ್ರಿಕ್‌ಟನ್‌ನಲ್ಲಿ ೮೦೦ ಟನ್ ಮಾತ್ರ ಸ್ಥಳೀಯ ಟಿಪ್ಪರ್‌ಗಳಿಗೆ ನೀಡಿದ್ದು, ಉಳಿದ ಮೂರು ಸಾವಿರ ಮೆಟ್ರಿಕ್ ಟನ್‌ನ್ನು ಹೊರಗಡೆಯಿಂದ ಬಂದ ಟಿಪ್ಪರ್‌ಗಳಿಗೆ ಸಾಗಾಟಕ್ಕೆ ಅವಕಾಶ ಮಾಡಿರುವುದು ಅನ್ಯಾಯವೆಂಬ ನಮ್ಮ ಬೇಡಿಕೆಗೆ ಉತ್ತಮ ಬೆಂಬಲ ಸಿಗುತ್ತಿದೆ. ನಮ್ಮ ಮನವಿಯನ್ನು ತಾಲ್ಲೂಕು ಆಡಳಿತ ಈಡೇರಿಸದ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲವೆಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿರಾಮದಾಸ್, ಟಿ.ಮಂಜುನಾಥ, ಟಿಪ್ಪರ್ ಮಾಲೀಕರ ಸಂಘದ ಉಪಾಧ್ಯಕ್ಷ ಜಿ.ಆರ್.ರಾಮಣ್ಣ, ಎಸ್.ಅಶೋಕ್, ಕೆ.ಎಂ.ನಿಜಾಮುದ್ದೀನ್, ಕಾರ್ಯದರ್ಶಿ ಜಿ.ಕೆ.ಮಹಲಿಂಗಪ್ಪ, ಈರಣ್ಣ, ಓಬಯ್ಯ, ರುದ್ರೇಶ್, ಹರೀಶ್, ಕನ್ನಡಪರ ಸಂಘಟನೆಯ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.