ಸಮಾಜಕ್ಕೆ ಟಿಪ್ಪುಸುಲ್ತಾನ್ ನೀಡಿದ ಕೊಡುಗೆ ಅಪಾರ: ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ದೇಶವನ್ನು ರಕ್ಷಿಸುವುದಲ್ಲದೆ
, ಅಭಿವೃದ್ದಿ ಪಥದತ್ತ ಮುನ್ನಡೆಸಿದ ಕೆಲವೇ ನಾಯಕರು ಇಂದಿಗೂ ಎಲ್ಲರಿಗೂ ಆದರ್ಶಪ್ರಾಯರಾಗಿದ್ಧಾರೆ. ಧಾರ್ಮಿಕ, ಸಾಮಾಜಿಕ ಸೇವಾಚಟುವಟಿಕೆಗಳಲ್ಲಿ ತೊಡಗಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ನಾಯಕರಲ್ಲಿ ಟಿಪ್ಪುಸುಲ್ತಾನ್ ಸಹ ಒಬ್ಬರು ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ನಗರದ ಶಾದಿಮಹಾಲ್ ಸಭಾಂಗಣದಲ್ಲಿ ೨೭೪ನೇ ಟಿಪ್ಪುಸುಲ್ತಾನ್ ಜಯಂತಿ, ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿವರ್ಷವೂ ಈ ಕಾರ್ಯಕ್ರಮ ಶಾಂತಿಸೌಹಾರ್ಧತೆಯಿಂದ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಹಜರತ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂವಲಿ, ಎಚ್.ಎಸ್.ಸೈಯದ್, ನಗರಸಭಾ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯ ಬಿ.ಟಿ.ರಮೇಶ್‌ಗೌಡ, ಎಂ.ಜೆ.ರಾಘವೇಂದ್ರ, ಕೆ.ವೀರಭದ್ರಪ್ಪ, ನಾಮಿನಿ ಸದಸ್ಯ ಅನ್ವರ್ ಮಾಸ್ಟರ್, ಮುಖಂಡರಾದ ಶಶಿಧರಕೆಜಿಎನ್ ಮುಜೀಬುಲ್ಲಾ, ಅತಿಕೂರ್ ರೆಹಮಾನ್, ಎಂ.ದಾದಾಪೀರ್, ತಾಲ್ಲೂಕು ವೇದಿಕೆ ಅಧ್ಯಕ್ಷ ಪಿ.ಬಷೀರ್ ಹಯಾತ್, ಮಹಮ್ಮದ್‌ಕಲಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

- Advertisement -  - Advertisement -  - Advertisement - 
Share This Article
error: Content is protected !!
";