ಬದುಕಿಗೆ ಬೇಕಾದ ಸಲಹೆಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ನಾಗರಿಕ ಸಮಾಜದಲ್ಲಿ ಸಂಬಂಧಗಳ ವಿಶ್ವಾಸ ಗಟ್ಟಿಯಾಗಿ ನಿಲ್ಲಬೇಕಿದೆ ಎಂದರೆ ಕೆಲವೊಂದು ಸನ್ನಿವೇಶಗಳ ಘಟನೆಗಳನ್ನು ನೋಡಿಯೂ ನೋಡದಂತೆ ಇರಬೇಕು.

ಕೆಲವೊಮ್ಮೆ ವಿಶ್ವಾಸದ ಆತ್ಮೀಯತೆಯಲಿ ಅಸಡ್ಡೆ ಮಾತುಗಳು ಕೇಳಿಬರುತ್ತವೆ. ಆ ಮಾತುಗಳು ನಮ್ಮ ಕಿವಿಗೆ ಕೇಳಲಿಲ್ಲ ಎಂಬಂತೆ ಅಸಡ್ಡೆ ತೋರಬೇಕು.

ಕೆಲವೊಮ್ಮೆ ಸತ್ಯದ ಮಾತುಗಳ ಮೂಲಕ ನಾಗರಿಕ ಸಮಾಜವನ್ನು ಉನ್ನತ ದಿಕ್ಕಿನತ್ತ ಕೊಂಡೊಯ್ಯುವ ಅವಕಾಶ ಇದ್ದರೂ ಸತ್ಯದ ಘನಘೋರ ಘಟನೆಗಳನ್ನು ಎದುರಿಸಲು ಸಾಧ್ಯವಿಲ್ಲದೆ ಮಾತನಾಡದೆ ಇರಬೇಕು.

ಈ ವಿಚಾರಗಳು ನಾಗರಿಕ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಬದುಕಲು ಬೇಕಾದ ನೀತಿ ನಿಯಮಗಳ ಪಾಠವಾಗಿದೆ. ಈ ವಿಚಾರದಲ್ಲಿ ನಯನಾಜೂಕು ಅಳವಡಿಸಿಕೊಂಡು ನಾಟಕೀಯ ರೀತಿಯಲ್ಲಿ ಬದುಕಿದವರು ಯೋಗ್ಯತೆ ಮೀರಿ  ಉನ್ನತ ಸ್ಥಾನ ಪಡೆದಿರುವುದಕ್ಕೆ ಹಲವು ಸಾಕ್ಷಿ ಗುಡ್ಡೆಗಳಿವೆ.

ಸತ್ಯ ಸುಳ್ಳಾಗದು, ಸುಳ್ಳು ಸತ್ಯವಾಗದು, ಬದುಕಿನ ಆದರ್ಶ ಜೀವಿಸಬೇಕು ಅದುವೆ ಜೀವನದ ಸಾರ್ಥಕತೆ ಎಂದು ರಘು ಗೌಡ ತಿಳಿಸಿದ್ದಾರೆ.

Share This Article
error: Content is protected !!
";