ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತೋಟಗಾರಿಕೆ ಇಲಾಖೆ, ಜೈವಿಕ ಕೇಂದ್ರ ಹುಳಿಮಾವು ಇಲ್ಲಿ ಕಳೆದ 24 ವರ್ಷಗಳಿಂದ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿ, ಉತ್ತಮ ಗುಣಮಟ್ಟದ ಅಂಗಾಂಶ ಕೃಷಿ ಪಚ್ಚ ಬಾಳೆ (ಗ್ರ್ಯಾಂಡ್ ನೈನ್) ಸಸ್ಯೋತ್ಪಾದನೆ ಕೈಗೊಳ್ಳುತ್ತಿದೆ.
ವಿವಿಧ ಹಂತದ ಬಾಳೆ ಸಸಿಗಳು ಮಾರಾಟಕ್ಕೆ ಲಭ್ಯವಿದ್ದು, ಎಕ್ಸ್ ಅಗಾರ್ – ಪ್ರತಿ ಸಸಿಗೆ ರೂ.6/-, 100 ಕ್ಯಾವಿಟಿವುಳ್ಳ ಪೆÇ್ರೀಟ್ರೇ – ಪ್ರತಿ ಸಸಿಗೆ ರೂ.7/- ಮತ್ತು 4”x6” ಪಾಲಿಬ್ಯಾಗ್ – ಪ್ರತಿ ಸಸಿಗೆ ರೂ.11/- ನಿಗದಿಪಡಿಸಲಾಗಿದೆ.
ಪಾಲಿಬ್ಯಾಗ್‍ನಲ್ಲಿ ಅಂಗಾಂಶ ಕೃಷಿ ಬಾಳೆ ಸಸಿಗಳನ್ನು ಖರೀದಿಸುವ ರೈತರು ತಮ್ಮ ತೋಟಕ್ಕೆ ಸಾಗಾಣಿಕೆ ಸೌಲಭ್ಯ ಬಯಸಿದ್ದಲ್ಲಿ, ಸಾಗಾಣಿಕೆ ಸೌಲಭ್ಯ ನೀಡಲಾಗುವುದು. ಸಸಿ ಮತ್ತು ಸಾಗಾಣಿಕೆ ವೆಚ್ಚ ಸೇರಿ ಪ್ರತಿ ಸಸಿಗೆ ರೂ.13/- ದರ ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪ ನಿರ್ದೇಶಕರು (ಅಂಕೃ) ಮೊ.ಸಂ. 7975736459, ಸಹಾಯಕ ತೋಟಗಾರಿಕೆ ಅಧಿಕಾರಿ –9880234281, 7026235854 ಹಾಗೂ ತೋಟಗಾರಿಕೆ ಸಹಾಯಕರು – 8147608936 ನ್ನು ಸಂಪರ್ಕಿಸಬಹುದು.