ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದಶಕಗಳ ಇತಿಹಾಸ ಹೊಂದಿರುವ ನೇಕಾರ ಮುಖವಾಣಿ ಯಾದ ನಗರದ ಟೆಕ್ಸ್ಟೈಲ್ ಮಾನ್ಯುಫಾಕ್ಚರ್ ಕೋ ಆಪರೇಟಿವ್ ಬ್ಯಾಂಕ್ ನ 2025–2030ರ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಹನ್ನೊಂದು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸದ ಕಾರಣ ಆ ಸ್ಥಾನ ಖಾಲಿ ಇದೆ ಎಂದು ಚುನಾವಣಾಧಿಕಾರಿ ಬಿ. ವಿ. ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯಾದ ನಿರ್ದೇಶಕರು-
ಸಾಮಾನ್ಯ ಸ್ಥಾನಕ್ಕೆ ಜಿ. ಮಂಜುನಾಥ್, ಎ. ಆರ್. ಶಿವಕುಮಾರ್, ಪಿ. ಸಿ. ವೆಂಕಟೇಶ್, ಡಿ. ಪ್ರಶಾಂತ್ ಕುಮಾರ್, ಕೆ. ಜಿ. ಗೋಪಾಲ್, ಬಿ. ಆರ್. ಉಮಾಕಾಂತ್, ನಾರಾಯಣ್ ಎನ್. ನಾಯ್ಡು, ಮಹಿಳಾ ಮೀಸಲು ಸ್ಥಾನಕ್ಕೆ ಡಾ. ಆರ್. ಇಂದಿರಾ, ಎ. ಗಿರಿಜಾ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಕೆ. ಪಿ. ವಾಸುದೇವ್, ಹಿಂದುಳಿದ ವರ್ಗ ಬಿ. ಸ್ಥಾನಕ್ಕೆ ಎಸ್. ಅನಿಲ್ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಆಯ್ಕೆಯಾಗಿರುವ ತಂಡ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ಎ. ಎಸ್. ಕೇಶವ ಸ್ಪರ್ದಿಸದ ಕಾರಣ ಅವರ ಸ್ಥಾನಕ್ಕೆ ಎಸ್. ಅನಿಲ್ ಆಯ್ಕೆಯಾಗಿದ್ದಾರೆ.
ಅವಿರೋಧ ಆಯ್ಕೆಗೆ ಸಹಕರಿಸಿದ ಬ್ಯಾಂಕಿನ ಎಲ್ಲಾ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದು, ಬ್ಯಾಂಕಿನ ಪ್ರಗತಿಗೆ ನಮ್ಮ ತಂಡ ಅವಿರತವಾಗಿ ಶ್ರಮಿಸಲಿದೆ ಎಂದು ನಿಕಟ ಪೂರ್ವ ಅಧ್ಯಕ್ಷ ಕೆ. ಪಿ. ವಾಸುದೇವ್ ಹೇಳಿದ್ದಾರೆ.