ಮಗ್ಗಿ ಪುಸ್ತಕದ ಮೂಲಕ ಮತ್ತೊಮ್ಮೆ ಕನ್ನಡಕ್ಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಗ್ಗಿ ಪುಸ್ತಕದ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ಬಾಹುಬಲಿ ಖ್ಯಾತಿಯ ಸಂಗೀತ ನಿರ್ದೇಶಕ ಕೀರವಾಣಿ ಗಾಯನ.

ಇತ್ತೀಚೆಗೆ ಸಂದೇಶ ಪ್ರದಾನ ಚಿತ್ರಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಮಕ್ಕಳು ಸೇರಿದಂತೆ ಜನತೆಗೆ ಸಂದೇಶ ನೀಡುವ ಚಿತ್ರವಾಗಿ ತಯಾರಾಗುತ್ತಿದೆ ಮಗ್ಗಿಪುಸ್ತಕ‘. ಚಿನ್ನಸ್ವಾಮಿ ಬ್ಯಾನರ್ ಅಡಿಯಲ್ಲಿ ಹರಿವರಾಸನಂ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಯತಿರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

- Advertisement - 

ಇನ್ನು, ಯಶಸ್ ನಾಚಪ್ಪ ಸಂಗೀತ ನಿರ್ದೇಶನದಲ್ಲಿ ಬಾಹುಬಲಿ ಹಾಗೂ ಆರ್.ಆರ್. ಆರ್ ಖ್ಯಾತಿಯ ಎಂ.ಎಂ.ಕೀರವಾಣಿ ತುಂಬಾ ವರ್ಷಗಳ ನಂತರ ಕನ್ನಡ ಹಾಡಿಗೆ ಧ್ವನಿಯಾಗಿರುವುದು ವಿಶೇಷ. ಕನ್ನಡದ ಹೆಸರಾಂತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್, ಗುರುರಾಜ್ ಹೊಸಕೋಟೆ, ನವೀನ್ ಸಜ್ಜು, ಸೈಂಧವಿ, ವೈಕಂ ವಿಜಯಲಕ್ಷ್ಮಿ, ರವೀಂದ್ರ ಸುರಗಾವಿ ಸೇರಿದಂತೆ 18 ಗಾಯಕರು ಹಾಡಿರುವುದು ವಿಶೇಷ.

ಬೆಂಗಳೂರು, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ,ಮಂಗಳೂರು, ಹೆಚ್.ಡಿ. ಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಸಿದೆ ಚಿತ್ರತಂಡ. ನಂದಕುಮಾರ್ ಛಾಯಾಗ್ರಹಣ, ಶಿವಕುಮಾರ್ ಸಂಕಲನ ಚಿತ್ರಕ್ಕಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯಮುಗಿದು ಸೆನ್ಸಾರ್ ಹಂತದಲ್ಲಿದೆ. ಚಿತ್ರತಂಡ ಅತಿಶೀಘ್ರದಲ್ಲೆ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

- Advertisement - 

ಅತಿ ದೊಡ್ಡ ತಾರಾಗಣದ ಚಿತ್ರ ಇದಾಗಿದ್ದು, ರಂಜನ್ ಕಾಸರಗೋಡು, ರಕ್ಷ ಗೌಡ, ಮೇಘನಾ, ರಾನ್ವಿ ಶೇಖರ್,ಮೈಸೂರು ರಮಾನಂದ್, ಶೋಭರಾಜ್, ಕೃಷ್ಣ ಮಹೇಶ್ ಸೇರಿದಂತೆ ಇನ್ನಿತರರಿದ್ದಾರೆ.

ಡಾ. ವಿಷ್ಣುವರ್ಧನ್ ಅವರ ಅಪ್ಪಾಜಿ, ಜಮೀನ್ದಾರು ಚಿತ್ರದ ನಂತರ ಕನ್ನಡದಲ್ಲಿ ಎಂ.ಎಂ.ಕೀರವಾಣಿಯವರು ಮೊದಲ ಬಾರಿಗೆ ನಮ್ಮ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ. ಚಿತ್ರದಲ್ಲಿ 7 ಹಾಡುಗಳಿದ್ದು ಕನ್ನಡದ ಹೆಸರಾಂತ ಗಾಯಕರು ಹಾಡುಗಳನ್ನು ಹಾಡಿದ್ದಾರೆ. ಕಂಟೆಂಟ್ ಪ್ರದಾನವಾಗಿ ಸಂಗೀತ ಸಂಯೋಜನೆಗೊಂಡಿದೆ ಎಂದು ನಿರ್ದೇಶಕ ಹರಿವರಾಸನಂ ತಿಳಿಸಿದ್ದಾರೆ.

Share This Article
error: Content is protected !!
";