ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಲ್ಲಿನ ಬುದ್ಧ ನಗರದ ವ್ಯಾಪ್ತಿಯ ಸಾಧಿಕ್ ನಗರ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಪೌಷ್ಟಿಕ ಆಹಾರ ದಿನಾಚರಣೆ ಮಾಡಲಾಯಿತು.
ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣ ರಂಗಮ್ಮ ಮಾತನಾಡಿ ಗರ್ಭಿಣಿ ಬಾಣಂತಿಯರಿಗೆ ಹಾಗೂ ಇತರರಿಗೆ ಪೌಷ್ಟಿಕ ಆಹಾರ ಸೇವನೆ ಕುರಿತು ಮಾಹಿತಿ ನೀಡಿದರು.
ಅಸಾಂಕ್ರಾಮಿಕ ರೋಗಗಳು ಜಗತ್ತಿನಲ್ಲಿ ಸಾವಿಗೆ ಪ್ರಮುಖ ಕಾರಣವಾಗಿದೆ. ತಂಬಾಕು ಬಳಕೆ, ಅನಾರೋಗ್ಯಕರ ಆಹಾರ, ದೈಹಿಕ ನಿಷ್ಕ್ರಿಯತೆ ಮತ್ತು ಮದ್ಯಪಾನದ ಅತಿಯಾದ ಸೇವನೆ ಅಸಾಂಕ್ರಾಮಿಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಣ್ಣರಂಗಮ್ಮ ಎಚ್ಚರಿಸಿದರು.
ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಜೀವನ ಶೈಲಿಯನ್ನು ಬದಲಾಯಿಸುವುದು, ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವುದು ಮತ್ತು ಕಣ್ಗಾವಲು ವ್ಯವಸ್ಥೆಗಳನ್ನು ಬಲಪಡಿಸುವುದು ಮುಖ್ಯ ಎಂದು ಹೇಳಿದರು.
ಹಿರಿಯ ಆರೋಗ್ಯ ಕಾರ್ಯಕರ್ತೆ ಉಷಾ ಮಾತನಾಡಿ ಕುಟುಂಬ ಯೋಜನೆಗಳ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳ ಕುರಿತು ತಾಯಂದಿರಿಗೆ ಅರಿವು ಮೂಡಿಸಿದರು.
ಆರೋಗ್ಯ ನಿರೀಕ್ಷಾಧಿಕಾರಿ ಕುಮಾರಿ ಮಾನ್ಯ ಮಾತನಾಡಿ ಅಶಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ನೀಡಿದರು.
ಪ್ರಾರ್ಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸುಜಾತ ಇವರು ಮಕ್ಕಳ ಅತಿಸಾರ ಭೇದಿಯ ಬಗ್ಗೆ ಮಾಹಿತಿ ನೀಡಿದರು.
ಆಶಾ ಕಾರ್ಯಕರ್ತೆಯರಾದ ಪ್ರೇಮ, ಚೌಡಮ್ಮ, ರೇಣುಕಾ ಇವರು ಡೆಂಗ್ಯೂ ಪ್ರಕರಣಗಳ ಕುರಿತು ಮಾಹಿತಿ ನೀಡಿದರು.