ಇಂದು ಮತ್ತು ನಾಳೆ ಎರಡು ದಿನ ವಿದ್ಯುತ್ ವ್ಯತ್ಯಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
66/11
ಕೆ.ವಿ ಚಿತ್ರದುರ್ಗ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಭೂಗತ ಕೇಬಲ್‍ಗಳ ಮರುಜೋಡಣೆ ಕಾಮಗಾರಿ ಇರುವುದರಿಂದ 66/11 ಕೆವಿ ಚಿತ್ರದುರ್ಗ ವಿ.ವಿ ಕೇಂದ್ರಕ್ಕೆ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ

 ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ಇದೇ ಆಗಸ್ಟ್ 20 ಮತ್ತು 21ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.  

- Advertisement - 

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಚಿತ್ರದುರ್ಗ ನಗರ, ಕೆಳಕೋಟೆ, ಬ್ಯಾಂಕ್ ಕಾಲೋನಿ, ಗೋನೂರು, ಬೆಳಘಟ್ಟ, ಗುಟ್ಟದರಂಗವ್ವನಹಳ್ಳಿ, ವಿದ್ಯಾನಗರ, ಸೀಬಾರ, ಸಿ.ಜಿ.ಹಳ್ಳಿ, ಜೆ.ಸಿ.ಆರ್ ಬಡಾವಣಿ, ಚಂದ್ರವಳ್ಳಿ, ಪಿ.ಕೆ.ಹಳ್ಳಿ, ಮಿಲ್ಲ್ ಏರಿಯಾ, ಕೆ.ಡ್ಲೂ.ಎಸ್.ಎಸ್.ಬಿ, ಯೂನಿವರ್ಸಿಟಿ, ತ.ರಾ.ಸು ರಂಗಮಂದಿರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ತಿಮ್ಮರಾಯ ತಿಳಿಸಿದ್ದಾರೆ.

- Advertisement - 

Share This Article
error: Content is protected !!
";