“ಇಂದು ಈದ್ ಮಿಲಾದ್”

News Desk

“ಇಂದು ಈದ್ ಮಿಲಾದ್” ಪ್ರವಾದಿ ಜನ್ಮ ದಿನವೇ ಈದ್ ಮಿಲಾದ್
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಹಾ ಮನವತಾವಾದಿ ಪ್ರವಾದಿ ಮುಹಮ್ಮದ್ ಪೈಗಂಬರರು..
ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬವನ್ನು ಜಗತ್ತಿನಾದ್ಯಂತ ಜಶ್ನೆ-ಈದ್ ಮಿಲಾದುನ್ನಬೀ (ಈದ್ ಮಿಲಾದ್) ಎಂದು ಆಚರಿಸಲಾಗುತ್ತದೆ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೂರನೇ ತಿಂಗಳು ರಬ್ಬೀವುಲ್ ಆವ್ವಲ್ ನ 12ನೇ ದಿನ ಈ ಆಚರಣೆ ನಡೆಯುತ್ತದೆ.

ಅಲ್ಲಾಹ್ ನ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮ ದಿನದ ಅಂಗವಾಗಿ ಅವರ ಜೀವನ ಚರಿತ್ರೆ ಮತ್ತು ಸಂದೇಶಗಳನ್ನು ನೆನಪಿಸಲಾಗುತ್ತದೆ ವಿವಿಧ ಕಾರ್ಯಕ್ರಮ ಧಾರ್ಮಿಕ ಪ್ರವಚನ ಸಾಮೂಹಿಕ ಮೆರವಣಿಗೆ ಅಲ್ಲದೇ ತಮ್ಮ ಕೈಲಾದ ಮಟ್ಟಿಗೆ ಬಡವರಿಗೆ ದವಸ ಧನ್ಯಾಗಳನ್ನು ದಾನ ಮಾಡುವ ಮೂಲಕ ಪ್ರವಾದಿಯವರ ಜನ್ಮ ದಿನ ಆಚರಿಸಲಾಗುತ್ತದೆ.

ಇದು ಇತಿಹಾಸದಲ್ಲಿ ಹೆಚ್ಚು ಮಹತ್ವ ಪಡೆದುಕೊಂಡ ದಿನವಾಗಿದೆ. ಪ್ರವಾದಿ ಮುಹಮ್ಮದ್ ಪೈಗಂಬರರ ಜೀವನ ಜಗತ್ತಿಗೆಲ್ಲ ಮಾದರಿ ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಖುರಾನ್ ಮುಹಮ್ಮದ್ ಪೈಗಂಬರರಿಂದ ರಚನೆಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪ್ರವಾದಿಯವರು ಅಲ್ಲಾಹನ ಆದೇಶದನ್ವಯ 1400(ಇಂದಿಗೆ 1445) ವರ್ಷಗಳ ಹಿಂದೆಯೇ ಪವಿತ್ರ ಖುರಾನ್ ಗ್ರಂಥದ ಮೂಲಕ ಅಲ್ಲಾಹನ ಸಂದೇಶಗಳನ್ನು ಜಗತ್ತಿಗೆ ಭೋದಿಸಿದರು.

ಖುರಾನ್ ಮೂಲಕ ಅಲ್ಲಾಹ್ ನಿಂದ ಪ್ರವಾದಿಯವರ ವ್ಯಕ್ತಿತ್ವಕ್ಕೆ ಹೆಚ್ಚಿನ ಪುರಸ್ಕಾರ ನೀಡಲಾಗಿದೆ ಇಸ್ಲಾಂ ನಲ್ಲಿ ಭಯ ಭಕ್ತಿ ಶ್ರದ್ದೆ ಹಾಗೂ ನಂಬಿಕೆ ಇಟ್ಟುಕೊಂಡವರಿಗೆಲ್ಲ ಸಹನೆ ಸಹಾನುಭೂತಿ ಅಂತರಂಗಶುದ್ದಿ ಬಹಿರಂಗಶುದ್ದಿ ಆತ್ಮಶುದ್ದಿ ಹಾಗೂ ಆತ್ಮ ಸಾಕ್ಷಾತ್ಕಾರದ ಧರ್ಮವಾಗಿ ಇಸ್ಲಾಂ ಧರ್ಮ ಪರಿಣಮಿಸಿದೆ.

ಮುಸ್ಲಿಂರಿಗೆ ಈ ಪವಿತ್ರ ಪ್ರವಾದಿ ಅಲ್ಲಾಹನ ಮೆಹೆಬೂಬ್ (ದೂತ)ನೆಂದು ನೆನಪಿಸುತ್ತದೆ ಅಲ್ಲಾಹ್ ಮತ್ತು ಪವಿತ್ರ ಪ್ರವಾದಿ ದೌತ್ಯದ ಐಕ್ಯತೆಗೆ ಪ್ರತಿದಿನ ಐದು ಬಾರಿ ಮಾಡುವ ನಮಾಜ್ ಪಠಣ ಒತ್ತು ನೀಡುತ್ತದೆ.
ಹಾಗೆ ನೋಡಿದರೆ ಮನುಕುಲಕ್ಕೆ ಮಾರ್ಗದರ್ಶಿಯಾಗಿ ಅನೇಕ ಪ್ರವಾದಿಗಳನ್ನು ಅಲ್ಲಾಹ್ (ಭಗವಂತನು) ಕಳುಹಿಸಿಕೊಟ್ಟಿದ್ದಾನೆ. ಆದರಲ್ಲಿ ಮೊದಲಿಗೆ ಹಜರತ್ ಆದಮ್ ಅಲೈಹಿಸ್ಸಲಾತು ವಸ್ಸಲಾಮ್ ಹಾಗೂ ಕೊನೆಯ ಪ್ರವಾದಿ ಹಜರತ್ ಮುಸ್ತಾಫಾ ಸ್ವಲ್ಲಲ್ಲಾಹು ಅಲೈಹಿಸ್ವಲಾತು ವಸ್ಸಲಾಮ್ ಅಲ್ಲಾಹ್ ತನ್ನ ಸಂದೇಶಗಳನ್ನು ಇಸ್ಲಾಂನ ಪವಿತ್ರ ಪ್ರವಾದಿಯ ಮೂಲಕ ಮುಕ್ತಾಯಗೊಳಿಸುವ ಮತ್ತು ಪ್ರವಾದಿತನ ಹಾಗೂ ಸಂದೇಶವಾಹಕನ ಸಂಕೋಲೆಯನ್ನು ಪರಿಪೂರ್ಣಗೊಳಿಸುವ ಆಯ್ಕೆ ಮಾಡಿಕೊಂಡಿದ್ದಾನೆ.

ಅಲ್ಲಾಹ್ ತನ್ನ ಸಂವಹನ ಮತ್ತು ಸಂದೇಶಗಳನ್ನು ಪವಿತ್ರ ಖುರಾನ್ ನೊಂದಿಗೆ ಕೊನೆಗೊಳಿಸುವ ಆಯ್ಕೆಯನ್ನು ತನ್ನ ಕೊನೆಯ ಪ್ರವಾದಿ ಮತ್ತು ದೂತನಿಗೆ ಬಹಿರಂಗಪಡಿಸಿ ಪವಿತ್ರ ಪ್ರವಾದಿಗೆ ಗೌರವ ನೀಡಿರುತ್ತಾನೆ.

ಪವಿತ್ರ ಖುರಾನ್ ಸಹ ನೀತಿ ನಿಯಮಗಳೊಂದಿಗೆ ಪ್ರವಾದಿಗೆ ಅತೀ ಹೆಚ್ಚಿನ ಗೌರವಾರ್ಪಣೆ ಮಾಡಿದೆ ಈ ನಿಟ್ಟಿನಲ್ಲಿ ಒಂದು ಕಡೆಗೆ ಆಖಾಯೇ ದೋಜಹಾ ಸರ್ವರೇ ಕಾಯೇನಾತ್ˌನೂರೆ ಮುಜಸ್ಸಮ್ ಮದನಿಯೇ ತಾಜದಾರ್ˌ ದೋನೋಜಹಾಂಕೆ ಸರ್ದಾರ್ (ಜಗತ್ತಿಗೆಲ್ಲ ಆದರ್ಶ ಮಾದರಿ) ಎಂದು ಕರೆಯಲಾಗಿದೆ.
ಇನ್ನೊಂದು ಕಡೆಗೆ ಸೈಯದುಲ್ -ಎ- ಮುರ್ಸಲೀನ್ˌ ಖಾತಮುನ್ನಬಿಯೀನ್ ˌರಹಮತುಲ್ಲಿಲ್ ಅಲಮೀನ್( ಶುಭ ಸಂದೇಶಗಳನ್ನು ಕೊಂಡೊಯ್ಯುವವ) ಎಂದು ಕರೆಯಲಾಗಿದೆ.

ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನನಕ್ಕೆ ಮೊದಲು ಸೌದಿ ಅರೇಬಿಯಾದಲ್ಲಿ ಕತ್ತಲು ಮತ್ಟು ಅಙ್ಞನಾ ತುಂಬಿತ್ತು ಸಣ್ಣ ಪುಟ್ಟ ವಿಷಯಗಳಿಗೆ ಯುದ್ದಗಳಾಗುತ್ತಿದ್ದವು ಮೂಡನಂಭಿಕೆ ಮತ್ತು ದುರಾಚಾರ ಮನೆ ಮಾಡಿತ್ತು ಮಹಿಳೇಯರಿಗೆ ಸೂಕ್ತ ಗೌರವ ದೊರಕುತ್ತಿರಲಿಲ್ಲ ಕಾರ್ಮಿಕರ ಮೇಲೆ ನಿರಂತರವಾದ ಶೋಷಣೆ ನಡೆಯುತ್ತಿತ್ತು ಹಿಂಸೆ ಅನ್ಯಾಯ ದುರಹಂಕಾರ ತಂಡವಾಡುತ್ತಿತ್ತು ಇಂತಹ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಅಲ್ಲಿಯ ಜನರನ್ನು ಬದಲಾಯಿಸುವ ನಿಟ್ಟಿನಲ್ಲಿ ಪ್ರವಾದಿಯವರ ಶಾಂತಿ ಹಾಗೂ ಸೌಹಾರ್ದತೆಯ ಸಂದೇಶಗಳನ್ನು ಸಾರಿದರು ಜೊತೆಗೆ ಮಹಿಳೆಯ ಉದ್ದಾರ ಮತ್ತು ಅವರಿಗೆ ಗೌರವ ನೀಡುವುದನ್ನು ಒತ್ತಿ ಹೇಳಿದರು.

ಪ್ರವಾದಿಯವರ ಸಹನೆ ತಾಳ್ಮೆ ಜತೆಗೆ ಸಹಾನುಭೂತಿಯೊಂದಿಗೆ ಅಲ್ಲಾಹನ ಸಂದೇಶಗಳಿಂದ ಜನರನ್ನು ಆಕರ್ಷಿಸಿದರು ಆಗ ತಾನೇ ಜನಿಸಿದ ಹೆಣ್ಣು ಶಿಶುಗಳನ್ನು ಹತ್ಯೆ ಮಾಡುವಂತಹ ನಿಚಿಕೆಗೇಡಿನ ಪದ್ದತಿಯನ್ನು ನಿರ್ಮೂಲನೆಗೊಂಡವು ಸಮಾಜದಲ್ಲಿರುವ ಅರ್ಥಹೀನ ಸಂಪ್ರದಾಯಗಳು ಚದುರಿ ಹೋದವು ದ್ವೇಷ ಮತ್ತು ಅಸೂಯೆ ಕೊನೆಗೊಂಡು ಸ್ನೇಹ ಪ್ರೀತಿ ಸಹೋದರತ್ವ ಚಿಗುರೊಡೆದವು ಅಂತಹ ಮಹಾಮಾನವತಾವಾದಿ ಮುಹಮ್ಮದ್ ಪೈಗಂಬರ್ ರವರು ಹಾಕಿ ಕೊಟ್ಟ ಮಾರ್ಗ ಅವರ ಆದರ್ಶ ನಮ್ಮೆಲ್ಲರಿಗೆ ದಾರಿ ದೀಪವಾದರೆ ಬದುಕು ಸಾರ್ಥಕ ಆದರಂತೆ ಪ್ರತಿ ವರ್ಷ ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮ ದಿಂದ ಆಚರಿಸಲಾಗುತ್ತದೆ.
ಸಾಮೂಹಿಕ ಮೆರವಣಿಗೆ ನಡೆಯುತ್ತದೆ ಸರ್ವಧರ್ಮಿಯರು ಭಾಗಿಯಾಗಿ ಭಾವೈಕ್ಯತೆ ಸಾರಿ ಎಲ್ಲೇಡೆ ಧಾರ್ಮಿಕ ಪ್ರವಚನದ ಮೂಲಕ ಪ್ರವಾದಿ ಪೈಗಂಬರ್ ರವರ ಜೀವನ ಚರಿತ್ರೆ ಸಾರಲಾಗುತ್ತದೆ.

ಆದರೆ ಈಗ ನಾವೆಲ್ಲರೂ ಜಾತಿ ಧರ್ಮದ ಗೋಡೆಗಳಲ್ಲಿ ಪರಸ್ಪರ ದ್ವೇಷ ಅಸೂಯೆಗಳನ್ನು ಬಿತ್ತಿಸಿಕೊಂಡಿರುವ ಸಂಕಷ್ಟದ ಕಾಲದಲ್ಲಿದ್ದೇವೆ. ಬಡವರಿಗೆ ನೆರವಾಗುವ ಇಸ್ಲಾಂ ಧರ್ಮದ ಆಶಯವನ್ನು ಮರೆತಿದ್ದೇವೆ.
ಹಸಿದ ಹೊಟ್ಟೆಯಲ್ಲಿ ಮಲಗಿರುವಾಗ ಸತ್ಯವಿಶ್ವಾಸಿಯಾದವನು ತಾನು ಹೊಟ್ಟೆತುಂಬಾ ಊಟಮಾಡಿ ಮಲಗುವುದಿಲ್ಲ ಎಂದು ಪ್ರವಾದಿ ಮುಹಮ್ಮದ್ ಪೈಗಂಬರ್ ಹೇಳಿದ್ದಾರೆ ಇದನ್ನು ಪಾಲಿಸಿ ನಮ್ಮ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು.
ಹಲವಾರು ವಿವಿಧ ಕಾರಣಗಳಿಂದ ಎಷ್ಟೋ ಸಮಸ್ಯೆಗಳಿಂದ ಬಡಕುಟುಂಬಗಳು ಕಷ್ಟಗಳನ್ನು ಅನುಭವಿಸುತ್ತಿವೆ ಅಂತಹವರಿಗೆ ನೆರವಾಗುವ ಕಾಯಕದಲ್ಲಿ ನಮ್ಮ ಸಂತೋಷ ಕಾಣಬೇಕು.

ಸಂಕಷ್ಟದ ದಿನಗಳೂ ದೂರವಾಗಿ ಎಲ್ಲರೂ ಸಂತಸ ದಿಂದ ಬದುಕಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸೋಣ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ತತ್ವ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಆಳವಡಿಸಿಕೊಂಡು ಸರ್ವಧರ್ಮಗಳ ಜನರೊಂದಿಗೆ ಸಹಬಾಳ್ವೆಯಿಂದ ಬಾಳುತ್ತ ಅಲ್ಲಾಹನ ಅಙ್ಞಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈದ್ ಮಿಲಾದ್ ಹಬ್ಬದ ದಿನದಂದೇ ಈ ಸಂಕಲ್ಪ ಕೈಗೊಳೋಣ.
ಲೇಖನ-ಆದಿವಾಲ ಚಮನ್ ಷರೀಫ್, ಸಾಮಾಜಿಕ ಕಾರ್ಯಕರ್ತ, ಹಿರಿಯೂರು.

- Advertisement -  - Advertisement - 
Share This Article
error: Content is protected !!
";