ದೇಶದ ಉಕ್ಕಿನ ಮಹಿಳೆಯ ಜನ್ಮ ದಿನ ಇಂದು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀಮತಿ ಇಂದಿರಾಗಾಂಧಿ ಮಾಜಿ ಪ್ರಧಾನಿಗಳು ಅವರ ಜನ್ಮದಿನವಾದ  ನವೆಂಬರ್-19ರಂದು ಮಂಗಳವಾರ ಅವರ ಆಡಳಿತಾತ್ಮಕ ವಿಷಯಗಳನ್ನು ನೆನೆದು ಗೌರವಿಸುವ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್ ಅವರು ಪಕ್ಷದ ಪದಾಧಿಕಾರಿಗಳನ್ನು ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಆಹ್ವಾನಿಸಿದ್ದಾರೆ.

 ಸ್ಥಳ-ಕಾಂಗ್ರೆಸ್ ಭವನ ಚಿತ್ರದುರ್ಗ ನಗರ. ಸಮಯ ಬೆಳಿಗ್ಗೆ 10 ಗಂಟೆ ಸರಿಸುಮಾರಿಗೆ.
ಇಂದಿರಾಗಾಂಧಿ ಅವರು ದೇಶದ ಪ್ರಧಾನಿಯಾಗಿ 15 ವರ್ಷಗಳ  ಅವಧಿಯಲ್ಲಿ ಜನಸಾಮಾನ್ಯರ ಬದುಕಿನ ಪರವಾಗಿ ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಯ ಪರವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.

ಇಂದಿರಾಗಾಂಧಿ ಅವರ ಜಾಣ್ಮೆಯ ಅಡಳಿತ ದೇಶಕ್ಕೆ ಹೊಸತನದ  ಅಡಿಗಲ್ಲುಗಳು. ಹಸಿರು ಕ್ರಾಂತಿ, ಖಾಸಗಿ ಬ್ಯಾಂಕುಗಳ ರಾಷ್ಟ್ರೀಕರಣ, ಶಿಮ್ಲಾ ಒಪ್ಪಂದ, ಬಾಂಗ್ಲಾ ಉದಾರೀಕರಣ, ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಅವರ ದೂರದೃಷ್ಟಿಯ ಆಲೋಚನೆ, ವಿದೇಶಿ ನೀತಿಗಳು 

ಇವುಗಳೊಂದಿಗೆ ಜನಸಾಮಾನ್ಯರ ಬದುಕಿನ ಪರವಾಗಿ 20 ಅಂಶಗಳ ಯೋಜನೆ ರೂಪಿಸಿ ಅವುಗಳನ್ನು ಅನುಷ್ಠಾನಕ್ಕೆ ತರಲು ಯಶಸ್ಸು ಕಂಡ ಕಾರಣಕ್ಕೆ ಈ ಕಾಲಮಾನದಲ್ಲಿ ದೇಶದಲ್ಲಿ ಬಡತನ ನಿರ್ಮೂಲನೆ ಕಾಣಲು ಸಾಧ್ಯವಾಗಿದೆ ಎಂಬುದಕ್ಕೆ ಸಾಕ್ಷಿ ಗುಡ್ಡೆಗಳು ಹಲವಾರು. ಇದು ಕಥೆಯಲ್ಲ ಪ್ರಜಾಪ್ರಗತಿಯ ಇತಿಹಾಸ ಎಂದು ಕಾಂಗ್ರೆಸ್ ಮುಖಂಡ ರಘು ಗೌಡ ತಿಳಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";