ಇಂದು ವಿವೇಕಾನಂದ ಜಯಂತೋತ್ಸವ ಮತ್ತು ಪ್ರಶಸ್ತಿ ಪ್ರದಾನ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
163
ನೇ ವಿವೇಕಾನಂದ ಜಯಂತೋತ್ಸವ ಕಾರ್ಯಕ್ರಮವನ್ನು ಬೆಂಗಳೂರು ನಗರದ ಕೆಂಗೇರಿ ಉಪನಗರದಲ್ಲಿರುವ ರಾಮಕೃಷ್ಣ ಸ್ಕೂಲ್, ಕೆಹೆಚ್ ಬಿ, ನೇತಾಜಿ ಬಡಾವಣೆಯಲ್ಲಿ ಇದೇ ಸೋಮವಾರ ಮಧ್ಯಾಹ್ನ 2 ಗಂಟೆಗೆ ಆಯೋಜಿಸಲಾಗಿದೆಂದು ಕರ್ನಾಟಕ ಆರ್ಟ್ಸ್ ಫೌಂಡೇಶನ್, ಬೆಂಗಳೂರು ಅಧ್ಯಕ್ಷರಾದ ಸರೋಜರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಯಂತೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಕೇಶವ ಪ್ರಸಾದ್‌, ಘನ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುಧೀಂದ್ರ ಕುಮಾರ್, ಮುಖ್ಯ ಅತಿಥಿಗಳಾಗಿ ಮಾಜಿ ಬಿಬಿಎಂಪಿ ಸದಸ್ಯರಾದ ರ. ಅಂಜಿನಪ್ಪ, ವಿ.ವಿ. ಸತ್ಯನಾರಾಯಣ, ರಾಜ್ಯ ಬಿಜೆಪಿ ವಕ್ತಾರ ಹಾಗೂ ರಾಷ್ಟ್ರೀಯ ಭೀಮ ಪಡೆ ರಾಜ್ಯಾಧ್ಯಕ್ಷ ಆತ್ಮಾನಂದ ಎಚ್.ಎ, ಸಮಾಜ ಸೇವಕ ಎಂ.ಬಿ. ಶಿವಕುಮಾರ್, ಅಂತಾರಾಷ್ಟ್ರೀಯ ಜನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ  ಆರ್.ಚಂದ್ರಶೇಖರ್ ಮತ್ತಿತರರು ಭಾಗವಹಿಸುವವರು.

- Advertisement - 

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ವಿವೇಕಾನಂದ ಜಯಂತೋತ್ಸವ ಅಂಗವಾಗಿ ವಿವೇಕಾನಂದ ಯುವ ಪ್ರಶಸ್ತಿಯನ್ನು ಕೆಂಗೇರಿ ಠಾಣೆಯ ಸಬ್ ಇನ್ಸ್‌ಪೆಕ್ಟರ್, ಸುರೇಖಾ, ಟೊಯೋಟಾ ಕಿರ್ಲೋಸ್ಕರ್ ನೌಕರರ ಅಧ್ಯಕ್ಷ ದೀಪಕ್ ಮತ್ತು ಸಂಶೋಧನಾ ವಿದ್ಯಾರ್ಥಿ (ಪಿಎಚ್.ಡಿ) ಈಶ್ವರ್ ಇವರುಗಳಿಗೆ ನೀಡಲಿದ್ದಾರೆಂದು ಕರ್ನಾಟಕ ಆರ್ಟ್ಸ್ ಫೌಂಡೇಶನ್, ಬೆಂಗಳೂರು ಅಧ್ಯಕ್ಷೆ ಸರೋಜ ಹೇಳಿದ್ದಾರೆ.

 

- Advertisement - 

 

Share This Article
error: Content is protected !!
";