ಇಂದು ಜೆ.ಎನ್.ಕೋಟೆ ಗುರುಸಿದ್ದಪ್ಪನವರಿಗೆ ನುಡಿ ನಮನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ  ಜುಲೈ-5ರಂದು ಬೆಳಿಗ್ಗೆ 11 ಗಂಟೆಗೆ ನೀಲಕಂಠಶ್ವೇರ ದೇವಸ್ಥಾನ ಪಕ್ಕದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪಕ್ಷದ  ಹಿರಿಯ ಉಪಾಧ್ಯಕ್ಷರಾದ ಜೆ. ಎನ್.ಕೋಟೆ ಗುರುಸಿದ್ದಪ್ಪನವರು ನಿಧನರಾಗಿದ್ದು  ಪಕ್ಷದ ವತಿಯಿಂದ ನುಡಿ ನಮನ ಕಾರ್ಯಕ್ರಮ ಹಮ್ಮಿ ಕೂಳ್ಳಲಾಗಿದೆ.

ಜಿಲ್ಲಾಧ್ಯಕ್ಷ ಎಂ.ಜಯಣ್ಣ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಪ್ರದೇಶ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಜಿಲ್ಲಾ ಜೆಡಿಎಸ್ ಘಟಕದ ಮಾಜಿ ಅಧ್ಯಕ್ಷ ಡಿ ಯಶೋಧರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.

- Advertisement - 

ಪಕ್ಷದ ಎಲ್ಲಾ ಘಟಕದ ಪದಾಧಿಕಾರಿಗಳು, ತಾಲ್ಲೂಕು ಘಟಕದ  ಪದಾಧಿಕಾರಿಗಳು ಮತ್ತು  ಪಕ್ಷದ ಕಾರ್ಯಕರ್ತರು, ಗುರುಸಿದ್ದಪ್ಪನವರ ಬಂಧು ಬಳಗದವರು ಆಗಮಿಸುವರು ಎಂದು ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲ ಸ್ವಾಮಿ ನಾಯಕ ತಿಳಿಸಿದ್ದಾರೆ.

 

- Advertisement - 

 

Share This Article
error: Content is protected !!
";