ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಕಸಬಾ ಹೋಬಳಿಯ ತೊಗರಿ ಮತ್ತು ಶೇಂಗಾ ಬೆಳೆಗಾರರ ಸಂಘ ತೊಗರಿ ಬೆಳೆಗಾರರಿಗೆ ಮಧ್ಯಂತರ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕಳೆದ ಮೂರು ತಿಂಗಳಿನಿಂದ ನಿರಂತರ ಪ್ರತಿಭಟನೆ, ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡರೂ ತೊಗರಿ ಬೆಳೆಗಾರರು ಮಾತ್ರ ಸಂಕಷ್ಟತಪ್ಪಿಲ್ಲ. ಮಧ್ಯಂತರ ಪರಿಹಾರ ನೀಡುವಂತೆ ರಾಜ್ಯಸರ್ಕಾರಕ್ಕೆ ತೊಗರಿಬೆಳೆಗಾರರ ಪರವಾಗಿ ವಿನಂತಿಮಾಡುವಂತೆ ಸಿರಿಗೆರೆ ಸದ್ಧರ್ಮ ನ್ಯಾಯಪೀಠದ ಡಾ.ಶಿವಮೂರ್ತಿಶಿವಾಚಾರ್ಯ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಸಿ.ಶಿವಲಿಂಗಪ್ಪ, ಸಿರಿಗೆರೆ ಬೃಹನ್ಮಠದಲ್ಲಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಕಳೆದ ಮೂರು ತಿಂಗಳಿನಿಂದ ತೊಗರಿಬೆಳೆಗಾರರು ನಡೆಸುತ್ತಿರುವ ಹೋರಾಟದ ಬಗ್ಗೆ ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ಸಂಬಂಧಪಟ್ಟ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದರೂ ನಿರೀಕ್ಷಿತ ಫಲದೊರಕಿಲ್ಲ.
ಲಕ್ಷಾಂತರ ರೂಪಾಯಿ ಸಾಲಮಾಡಿ ರೈತರು ಬೆಳೆಬಿತ್ತಿದ್ದು, ಅದು ಸಹ ಕೈಗೆ ಎಟಕುತ್ತಿಲ್ಲ. ಇದರಿಂದ ತೊಗರಿಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತಕ್ಕೆ ತೊಗರಿಬೆಳೆಗಾರರಿಗೆ ಶೇ.೨೫ರಷ್ಟು ಮಧ್ಯಂತರ ಪರಿಹಾರ ನೀಡುವಂತೆ ಬೆಳೆಗಾರರ ಪರವಾಗಿ ಜಿಲ್ಲಾಡಳಿತಕ್ಕೆ ಮನದಟ್ಟುಮಾಡುವಂತೆ ವಿನಂತಿಸಿದರು.
ಮನವಿ ಸ್ವೀಕರಿಸಿದ ಸ್ವಾಮೀಜಿ, ರೈತರು ಲಕ್ಷಾಂತರ ಸಾಲಮಾಡಿ ಬೆಳೆಬೆಳೆದ ಸಂದರ್ಭದಲ್ಲಿ ಬೆಳೆಗಳ ಬೆಲೆ ಕುಂಠಿತವಾಗುತ್ತದೆ. ರೈತರುಬೆಳೆದ ಬೆಳೆಗೆ ಯಾವುದೇ ಬೆಂಬಲ ಬೆಲೆನೀಡದ ಸರ್ಕಾರ ನಿರ್ಲಕ್ಷ್ಯೆವಹಿಸಿದೆ. ತಮ್ಮ ಮನವಿಯ ಬಗ್ಗೆ ಸೂಕ್ತಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರ ಡಾ.ಆರ್.ಎ.ದಯಾನಂದಮೂರ್ತಿ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮುಂತಾದವರು ಇದ್ದರು.

