ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು– ಶಿವಗಂಗೆ – ಸಿದ್ಧಗಂಗಾಮಠ – ದೇವರಾಯನದುರ್ಗ– ಗೊರವನಹಳ್ಳಿ – ವಿದುರಾಶ್ವಥ – ಘಾಟಿ ಸುಬ್ರಹ್ಮಣ್ಯ ಮಾರ್ಗದಲ್ಲಿ ಅಶ್ವಮೇಧ ಕ್ಲಾಸಿಕ್ ಸಾರಿಗೆಯನ್ನು ವಾರಾಂತ್ಯದ ಶನಿವಾರ ಮತ್ತು ಭಾನುವಾರ ದಿನಗಳಲ್ಲಿ ಪ್ಯಾಕೇಜ್ ಪ್ರವಾಸ ಪ್ರಾರಂಭಿಸಲಾಗಿದೆ. ಈ ಪ್ರವಾಸ ಬೆಳಿಗ್ಗೆ 6.30ಕ್ಕೆ ಪ್ರಾರಂಭಗೊಂಡು ರಾತ್ರಿ 8 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಈ ಪ್ರವಾಸ ಇದೇ ಜುಲೈ 26 ರಿಂದ ಪ್ರಾರಂಭಗೊಳ್ಳುತ್ತದೆ. ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನ/ ರಾತ್ರಿ ಊಟವನ್ನು ಹೊರತುಪಡಿಸಿ, ಅಶ್ವಮೇಧ ಕ್ಲಾಸಿಕ್ ಸಾರಿಗೆ ಪ್ರಯಾಣ ಮುಂಗಡ ಬುಕಿಂಗ್ ಸೇರಿ ವಯಸ್ಕರರಿಗೆ ರೂ. 650 ಹಾಗೂ 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ರೂ. 500 ದರ ನಿಗದಿಪಡಿಸಿದೆ
ಸಾರ್ವಜನಿಕ ಪ್ರಯಾಣಿಕರು ಮೇಲೆ ತಿಳಿಸಿರುವ ಪ್ಯಾಕೇಜ್ ಪ್ರವಾಸ ಸಾರಿಗೆ ಸೌಲಭ್ಯಕ್ಕಾಗಿ ಟಿಕೆಟ್ ಪಡೆಯಲು ವೆಬ್‍ಸೈಟ್ www.ksrtc.in & www.ksrtc.karnataka.gov.in ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-26252625 / 7760990100 / 7760990560 / 7760990287 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

