ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೊಳಪಟ್ಟ ಪ್ರವಾಸೋದ್ಯಮ ಇಲಾಖೆಯ ಅಂಗ ಸಂಸ್ಥೆಯಾಗಿದ್ದು, ಕಳೆದ 53 ವರ್ಷಗಳಿಂದ ಆತಿಥ್ಯ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ನಿಗಮವು ಮೈಸೂರು ಸಾರಿಗೆ ವಿಭಾಗದಿಂದ ಮೈಸೂರು, ಮಂತ್ರಾಲಯ, ಪಂಚಮುಖಿ ಆಂಜನೇಯ ದೇವಸ್ಥಾನ ಟೂರ್ ಪ್ಯಾಕೇಜ್ ಅನ್ನು ಫೆಬ್ರವರಿ 5 ರಿಂದ ಪ್ರಾರಂಭಿಸುತ್ತಿದೆ.
ಟೂರ್ ಪ್ಯಾಕೇಜ್ ಮೂರು ದಿನಗಳ ಅವಧಿಯದ್ದಾಗಿದ್ದು, ವಾರದ ಪ್ರತಿ ಬುಧವಾರದಂದು ಹೊರಡಲಿರುವ ಪ್ಯಾಕೇಜ್‍ಗೆ ಒಬ್ಬರಿಗೆ ರೂ.3,935 ಗಳಾಗಿದ್ದು ಸದರಿ ಪ್ಯಾಕೇಜ್‍ನಲ್ಲಿ ಪ್ರವಾಸಿಗರಿಗೆ ವಿಶ್ರಾಂತಿ ಕೋಣೆ, ಪ್ರವಾಸ ಮಾರ್ಗದರ್ಶಿ, ಎ.ಸಿ ಡಿಲೆಕ್ಸ್ ಬಸ್ ಸಾರಿಗೆ ಒಳಗೊಂಡಿರುತ್ತದೆ, ಪ್ರತಿ ಬುಧವಾರ ಸಂಜೆ 06:00 ಸಮಯಕ್ಕೆ ಹೊರಟು ಶುಕ್ರವಾರ ಬೆಳಗ್ಗೆ: 06:00 ಸಮಯಕ್ಕೆ ಮೈಸೂರಿಗೆ ಹಿಂತಿರುಗಲಿದೆ.
ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆತಿಥ್ಯ ಸೇವೆಯನ್ನು ಒದಗಿಸುತ್ತಾ ಬಂದಿರುತ್ತದೆ. ನಿಗಮವು ದಕ್ಷಿಣ ರಾಜ್ಯಗಳನ್ನೊಳಗೊಂಡಂತೆ ರಾಜ್ಯ ಮತ್ತು ಅಂತರಾಜ್ಯ ಮಟ್ಟದಲ್ಲಿ ಪ್ರವಾಸಗಳನ್ನು ಆಯೋಜನೆ ಮಾಡಲಾಗುತ್ತಿದೆ. ಪ್ರವಾಸಿಗರಿಗೆ ಪ್ರವಾಸಿಗರಿಗೆ ಪ್ರಮುಖವಾಗಿ ಕರ್ನಾಟಕ ಹಾಗೂ ದಕ್ಷಿಣ ರಾಜ್ಯಗಳ ವಿವಿಧ ದಾರ್ಮಿಕ. ಐತಿಹಾಸಿಕ, ಪಾರಂಪರಿಕ, ಭೌಗೋಳಿಕ, ನೈಸರ್ಗಿಕ ಪ್ರವಾಸಿ ತಾಣಗಳಿಗೆ ವಿವಿಧ 40 ಕಿಂತ ಹೆಚ್ಚು ವ್ಯವಸ್ಥಿತ ಪ್ರವಾಸಗಳನ್ನು ಆಯೋಜನೆ ಮಾಡಲಾಗುತ್ತಿದೆ.
ಈ ಪ್ರವಾಸ ಸೇವೆಯ ಸದುಪಯೋಗ ಪಡೆಯಲಿಚ್ಛಿಸುವ ಪ್ರವಾಸಿಗರು ನಿಗಮದ ಯಶವಂತಪುರ ಕೇಂದ್ರ ಕಛೇರಿಯ ಬುಕ್ಕಿಂಗ್ ಕೌಂಟರ್, ಮೈಸೂರು ಸಾರಿಗೆ ವಿಭಾಗ, ಕೆಂಪೇಗೌಡ ಬುಕ್ಕಿಂಗ್ ಕೌಂಟರ್ ಹಾಗೂ ರೆಡ್ ಬಸ್ ಪೆÇೀರ್ಟಲ್ ಹಾಗೂ ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್‍ಗಳ ಮುಖಾಂತರ ಮುಂಗಡ ಬುಕ್ಕಿಂಗ್ ಮಾಡಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆನ್‍ಲೈನ್ ಬುಕ್ಕಿಂಗ್ ಮಾಡಲು ಜಾಲತಾಣ www.kstdc.co ಹಾಗೂ ದೂರವಾಣಿ ಸಂಖ್ಯೆ: 080-4334 4334/35, 8970650070 / 8970650075 ಮೈಸೂರು ಸಾರಿಗೆ ವಿಭಾಗದ ದೂರವಾಣಿ ಸಂಖ್ಯೆ: 8970656400 / 08212423652 ಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಆಡಳಿತ ವಿಭಾಗದ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.