ಫೆ.26ರಿಂದ ಪ್ರವಾಸಿ ಮೇಳ: ಪ್ರವಾಸೋದ್ಯಮ ಉದ್ದಿಮೆದಾರರು ಪಾಲ್ಗೊಳ್ಳಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ವತಿಯಿಂದ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ಪೋ2025” ಕಾರ್ಯಕ್ರಮವನ್ನು ಇದೇ ಫೆ.26 ರಿಂದ 28 ರವರೆಗೆ ಬೆಂಗಳೂರು ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೋಟೆಲ್ ಉದ್ದಿಮೆದಾರರು, ಟ್ರಾವೆಲ್ ಏಜೆನ್ಸಿ, ಹೋಂಸ್ಟೇ, ಕರಕುಶಲಮಳಿಗೆದಾರರು, ಪ್ರವಾಸೋದ್ಯಮ ಸ್ಟೇಕ್ಹೋಲ್ಡ್ರ್ಗಳಿಗೆ ವ್ಯಾಪಾರವಹಿವಾಟು ಮಾಡಿಕೊಳ್ಳಲು ಸುಮಾರು ನೂರಾರು ವಿದೇಶಿ ಸಂಸ್ಥೆಗಳುದೇಶದ ಎಲ್ಲಾ ಭಾಗದ ಪಾಲದಾರರ ಸಂಸ್ಥೆಗಳಿಗೆ ಬಿಸಿನೆಸ್ ಟು ಬಿಸಿನೆಸ್ ಭಾಗವಹಿಸುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿರುವ ಹೋಟೆಲ್ ಉದ್ದಿಮೆದಾರರು, ಟ್ರಾವೇಲ್ ಏಜೆನ್ಸಿ ಹೋಂಸ್ಟೇ ಕರಕುಶಲ ಮಳಿಗೆದಾರರು, ಪ್ರವಾಸೋದ್ಯಮ ಸ್ಟೇಕ್ ಹೋಲ್ಡರ್ಗಳಿಗೆ ತಮ್ಮ ಉದ್ದಿಮೆಗಳನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಐ ಸಂಸ್ಥೆಗಳೊಂದಿಗೆ ವ್ಯವಹಾರ ಮಾಡಲು ಸುವರ್ಣಾವಕಾಶ ಇರುತ್ತದೆ.

- Advertisement - 

ಕಾರ್ಯಕ್ರಮದಲ್ಲಿ ವ್ಯಾಪಾರ ಮಳಿಗೆಗಳನ್ನು ಕಾಯ್ದಿರಿಸಲು ಆಸಕ್ತಿ ಹೊಂದಿರುವ ಉದ್ದಿಮೆದಾರರು ಕೂಡಲೇ, ಚಿತ್ರದುರ್ಗ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಬಿ.ಹೆಚ್.ಶಶಿಕುಮಾರ್ ಅವರನ್ನು ಸಂಪರ್ಕಿಸಬಹುದು.
ಹೆಚ್ಚಿನ ವಿವರಗಳಿಗೆ ಜಾಲತಾಣ https://www.karnatakatravelexpo.org  ಮತ್ತು https://register.karnataka travelexpo.org/ Users ಗೆ ಭೇಟಿ ನೀಡಿ ಮತ್ತು ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಚಿತ್ರದುರ್ಗ ಕಛೇರಿಯನ್ನು ಹಾಗೂ ಜಿಲ್ಲಾ ಸಮಲೋಚಕರು (ಡಿಟಿಸಿ) ಅವರ ಮೊಬೈಲ್ ಸಂಖ್ಯೆ 9901948850, ಕಚೇರಿ ಸಂಖ್ಯೆ 08194-234466 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

- Advertisement - 

Share This Article
error: Content is protected !!
";