ಪೀಣ್ಯ ಜಂಕ್ಷನ್​ನಿಂದ ಜಾಲಹಳ್ಳಿ ಕ್ರಾಸ್ ಜಂಕ್ಷನ್​ವರೆಗೆ ವಾಹನ ಸಂಚಾರ ನಿರ್ಬಂಧ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ
ಪೀಣ್ಯ 100 ಅಡಿ ರಸ್ತೆಯಲ್ಲಿ ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಜಂಕ್ಷನ್​ನಿಂದ ಜಾಲಹಳ್ಳಿ ಕ್ರಾಸ್ ಜಂಕ್ಷನ್​ವರೆಗೆ 200 ಮೀಟರ್ ರಸ್ತೆಯಲ್ಲಿ, ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿದೆ.

ಫೆಬ್ರವರಿ-1 ರ ಶನಿವಾರ ದಿಂದ ಕಾಮಗಾರಿ ಆರಂಭವಾಗಿದ್ದು ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ ಮತ್ತು ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

- Advertisement - 

ಸಂಚಾರ ನಿರ್ಬಂಧ-
ಪೀಣ್ಯ
100 ಅಡಿ ರಸ್ತೆಯಲ್ಲಿ ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಜಂಕ್ಷನ್​ನಿಂದ ಜಾಲಹಳ್ಳಿ ಕ್ರಾಸ್ ಜಂಕ್ಷನ್​ವರೆಗೆ ಫೆ.1 ರಿಂದ ಸಂಚಾರ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ-
ಪೀಣ್ಯ
100 ಅಡಿ ರಸ್ತೆಯ ಮೂಲಕ ಜಾಲಹಳ್ಳಿ ಕ್ರಾಸ್ ಜಂಕ್ಷನ್​ಕಡೆಗೆ ಹೋಗುವ ವಾಹನಗಳು: ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಜಂಕ್ಷನ್​ನಲ್ಲಿ ಬಲಕ್ಕೆ ಚಲಿಸಿ ರಸ್ತೆಯ ಮತ್ತೊಂದು ಬದಿಯ ಮೂಲಕ ದ್ವಿಮುಖ ಸಂಚಾರ ರಸ್ತೆಯ ಮೂಲಕ ಸಾಗಬಹುದು. ಎಲ್ಲಾ ಮಾದರಿಯ ಸರಕು ಸಾಗಣೆ ವಾಹನಗಳು ಟಿವಿಎಸ್ ಕ್ರಾಸ್ ಜಂಕ್ಷನ್​ನಿಂದ ಪೀಣ್ಯ ಪೊಲೀಸ್ ಠಾಣೆ ರಸ್ತೆಯ ಮೂಲಕ ಸಾಗಿ, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್​ನಲ್ಲಿ ತುಮಕೂರು ರಸ್ತೆಯ ಮೂಲಕ ಸಾಗಬಹುದಾಗಿದೆ ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement - 

 ವಾಹನ ನಿಲುಗಡೆ ನಿಷೇಧ:
ಇದೇ ವೇಳೆ ಪೀಣ್ಯ ಪೊಲೀಸ್ ಠಾಣೆ ರಸ್ತೆ
, ಪೀಣ್ಯ 100 ಅಡಿ ರಸ್ತೆ (ಜಾಲಹಳ್ಳಿ ಕ್ರಾಸ್ ನಿಂದ ಟಿವಿಎಸ್ ಕ್ರಾಸ್ ವರೆಗೆ) ಹಾಗೂ ಪೀಣ್ಯ 1ನೇ ಕ್ರಾಸ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ಕಾಮಗಾರಿ ಪೂರ್ಣಗೊಳ್ಳುವವರೆಗೆ, ತಾತ್ಕಾಲಿಕವಾಗಿ ನಿರ್ಬಂಧಿಸಿಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";