ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಅಬಕಾರಿ ಇಲಾಖೆಯ ಸನ್ನದುಗಳ ಇ-ಹರಾಜಿನಲ್ಲಿ ಭಾಗವಹಿಸುವ ಅರ್ಜಿದಾರರಿಗೆ ಜನವರಿ ೫ ರಂದು ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ.
ಅರ್ಜಿದಾರರು ಈ ತರಬೇತಿಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಅಬಕಾರಿ ನಿರೀಕ್ಷಕರುಗಳಾದ ಚಿಕ್ಕಮಗಳೂರಿನ ಮಮತಾ ಎನ್.ಎ. (೯೪೪೮೨೩೩೦೬೬), ಕಡೂರಿನ ಸಂದೀಪ್ ಎಲ್.ಸಿ. (೭೦೨೨೨೬೦೭೩೦), ತರೀಕೆರೆಯ ಶ್ರೀಕಾಂತ್ ಪಿ. (೯೯೬೪೦೦೫೫೩೬),
ಮೂಡಿಗೆರೆಯ ನಾರಾಯಣ್ ಎಂ.(೯೬೨೦೫೫೦೯೨೯೦), ಕೊಪ್ಪದ ದಿಲೀಪ್ಕುಮಾರ್ ಎಂ.ವಿ.(೯೭೩೧೨೬೫೦೦೨) ಹಾಗೂ ಎನ್.ಆರ್.ಪುರದ ಶೇಖರ್ ಎಂ.ಆರ್.(೯೪೪೮೩೦೯೪೯೯) ಅವರನ್ನು ಸಂಪರ್ಕಿಸಬಹುದು ಎಂದು ಅಬಕಾರಿ ಉಪ ಆಯುಕ್ತರು ಹಾಗೂ ನೋಡೆಲ್ ಅಧಿಕಾರಿಗಳಾದ ರೂಪ ಎಂ.(೯೪೪೯೫೯೭೨೦೨) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

