ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೊಡ್ಡಬಳ್ಳಾಪುರ ತಾಲೂಕಿನ ಆರೋಡಿ ವಲಯ ಸಾಸಲು ಕಾರ್ಯಕ್ಷೇತ್ರದ ತಮ್ಮಗಾನಹಳ್ಳಿ ಗ್ರಾಮದಲ್ಲಿ ಕೃಷಿ ಯಾಂತ್ರೀಕರಣ ಸಿರಿಧಾನ್ಯ ಬೆಳೆಗಳು, ಕೃಷಿ ಇಲಾಖೆ ಅನುದಾನಗಳ ಬಗ್ಗೆ ತರಬೇತಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಸುರೇಶ್ ಉದ್ಘಾಟಿಸಿಇಲಾಖಾ ಅನುದಾನ, ಸವಲತ್ತು ಗಳ ಬಗ್ಗೆ ಮಾಹಿತಿ ನೀಡಿದರು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಲೋಹಿತ್ ಗೌಡ ಮಾತನಾಡಿ ಯೋಜನೆಯಿಂದ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ಮಾಡುತ್ತಿದ್ದು ,ರೈತರು ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು ಯೋಜನೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು
ಗ್ರಾಮ ಪಂಚಾಯಿತಿ ಕೃಷಿ ಸಖಿ ನಾಗಮ್ಮ ನರೇಗಾ ಯೋಜನೆಯಡಿ ಮಂಜೂರಾಗುವ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು.
ಕೈತೋಟ,ಕೃಷಿ ಹೊಂಡ,ನರ್ಸರಿ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ರಂಗಸ್ವಾಮಿ, ವಲಯ ಮೇಲ್ವಿಚಾರಕ ಸುಪ್ರೀತ್, ಸೇವಾ ಪ್ರತಿನಿಧಿ ಪುಟ್ಟತಾಯಮ್ಮ ಸಂಘದ ಸದಸ್ಯರು ಹಾಜರಿದ್ದರು.