ಫೆ.5 ರಿಂದ ಮಾವು ಬಾಳೆ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ಕುರಿತು ತರಬೇತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಫೆ.05 ರಿಂದ 07 ರವರೆಗೆ ಜಿಲ್ಲೆಯ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕ್ರಮವಾಗಿ ದಾಳಿಂಬೆ, ಮಾವು ಹಾಗೂ ಬಾಳೆ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳ ಅಳವಡಿಕೆ ಮತ್ತು ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಫೆ.05ರಂದು ಬೆಳಿಗ್ಗೆ 10ಕ್ಕೆ ಬಬ್ಬೂರಿನ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಧರ್ ಅವರು ದಾಳಿಂಬೆ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು, ರೋಗಶಾಸ್ತ್ರಜ್ಞ ಡಾ.ಗುರುದೇವಿ ಅವರು ಬೆಳೆಯಲ್ಲಿ ಬರುವ ರೋಗಗಳ ನಿರ್ವಹಣೆ ಹಾಗೂ ಕೀಟಶಾಸ್ತ್ರಜ್ಞರಾದ ಡಾ.ತಾರಣಿ ಅವರು ದಾಳಿಂಬೆ ಬೆಳೆಯಲ್ಲಿ ಕೀಟಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡುವರು.  

ಫೆ.06 ರಂದು ಬೆಳಿಗ್ಗೆ 10ಕ್ಕೆ ಬಬ್ಬೂರಿನ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಧರ್ ರವರು ಮಾವು ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು ಹಾಗೂ ಬೆಳೆಯಲ್ಲಿ ಬರುವ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿಯಾದ ಡಾ.ಟಿ.ರುದ್ರಮುನಿ ವಿಷಯ ಮಂಡನೆ ಮಾಡುವರು.  

ಫೆ.07ರಂದು ಬೆಳಿಗ್ಗೆ 10ಕ್ಕೆ ಬಬ್ಬೂರು ಫಾರಂನ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞರಾದ ಡಾ.ಪಿ.ಎಸ್. ಮಹಾಂತೇಶ್ ಅವರು  ಬಾಳೆ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು ಹಾಗೂ ಬೆಳೆಯಲ್ಲಿ ಬರುವರೋಗ ಮತ್ತು  ಕೀಟಗಳ ನಿರ್ವಹಣೆ ಕುರಿತು ಬಬ್ಬೂರಿನ ತೋಟಗಾರಿಕೆ ಕಾಲೇಜಿನ ಹಿರಿಯ ಕ್ಷೇತ್ರ ಸಹಾಯಕರಾದ ಡಾ.ಜಿ.ಹನುಮಂತನಾಯಕ್ ವಿಷಯ ಮಂಡನೆ ಮಾಡುವರು.  

ಮೂರು ದಿನಗಳಲ್ಲಿ ಸಹ ಬೆಂಗಳೂರಿನ ಜೈನ್ ಇರಿಗೇಷನ್ ಕಂಪನಿಯ ಕೆ.ದೇವರಾಜ್ ಅವರು ನೀರಿನ ಸಮರ್ಥ ಬಳಕೆ,  ದಾಳಿಂಬೆ, ಮಾವು ಹಾಗೂ ಬಾಳೆ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆ ಮತ್ತು ಅವುಗಳ ನಿರ್ವಹಣೆಯ ಕುರಿತು ವಿಷಯ ಮಂಡನೆ ಮಾಡುವರು.  

ಪ್ರತಿ ದಿನ ಆಸಕ್ತ ಚಿತ್ರದುರ್ಗ ಜಿಲ್ಲೆಯ 60 ಜನ ರೈತಭಾಂದವರು  ತರಬೇತಿಯಲ್ಲಿ ಭಾಗವಹಿಸಲು 8277931058 ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್.ರಜನೀಕಾಂತ ತಿಳಿಸಿದ್ದಾರೆ.

ನೋಂದಾವಣಿ ಮಾಡಿಕೊಂಡ ರೈತಭಾಂದವರು ಫ್ರೂಟ್ಸ್ ಐಡಿ (ಎಫ್.ಐಡಿ) ಅಥವಾ ಚುನಾವಣೆ ಗುರುತಿನ ಚೀಟಿಯೊಂದಿಗೆ ತರಬೇತಿಗೆ ಹಾಜರಾಗಲು ವಿನಂತಿಸಿದೆ ಹಾಗೂ ಮೊದಲು ನೋಂದಾವಣಿ ಮಾಡಿಕೊಂಡ 60 ಜನ ರೈತಭಾಂದವರನ್ನು ತರಬೇತಿಗೆ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

- Advertisement -  - Advertisement -  - Advertisement - 
Share This Article
error: Content is protected !!
";