ಸೂಕ್ಷ್ಮ ನೀರಾವರಿ ತಾಂತ್ರಿಕತೆ ಮತ್ತು ನೀರಿನ ಮರು ಪೂರೈಕೆ, ರೈತರಿಗೆ ತರಬೇತಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೃಷಿ ಇಲಾಖೆಯ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಅಟಲ್ ಭೂಜಲ ಯೋಜನೆಯಡಿ ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ದಪಡಿಸುವುದು, ನೀರಿನ ಬೇಡಿಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು ಮತ್ತು ನೀರಿನ ಮರು ಪೂರೈಕೆ ಕ್ರಮಗಳ ಕುರಿತು ಇದೇ .29ರಂದು ಹಿರಿಯೂರು ತಾಲ್ಲೂಕಿನ ರೈತರಿಗೆ, .30ರಂದು ಚಳ್ಳಕೆರೆ ತಾಲ್ಲೂಕಿನ ರೈತರಿಗೆ ಹಾಗೂ .31ರಂದು ಚಿತ್ರದುರ್ಗ ತಾಲ್ಲೂಕಿನ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಬೆಳಿಗ್ಗೆ 10ಕ್ಕೆ  ಹಮ್ಮಿಕೊಳ್ಳಲಾಗಿದೆ.

 ತರಬೇತಿ ಕಾರ್ಯಕ್ರಮದಲ್ಲಿ ಅಟಲ್ ಭೂಜಲ ಯೋಜನೆಯ ರಾಜ್ಯ ಮತ್ತು ಜಿಲ್ಲಾ ಕಾರ್ಯಕ್ರಮ ನಿರ್ವಹಣೆ ಘಟಕದ ಅಧಿಕಾರಿಗಳು ಅಟಲ್ ಭೂಜಲ ಯೋಜನೆಯ ಉದ್ದೇಶ, ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ದಪಡಿಸುವುದರ ಕುರಿತು ವಿಷಯ ಮಂಡನೆ ಮಾಡುವರು.
ನೆಟಾಫಿಮ ಸಂಸ್ಥೆಯ ಬೇಸಾಯ ಶಾಸ್ತ್ರಜ್ಞರಾದ ಅಂಜಿನಪ್ಪ ಅವರು ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆ, ಹನಿ ನೀರಾವರಿ ಮತ್ತು ಸ್ಪ್ರೀಂಕ್ಲರ್ ಘಟಕಗಳ ಉಪಯೋಗ ಮತ್ತು ಅವುಗಳ ನಿರ್ವಹಣೆಯ ಹಾಗೂ ರಸವಾರಿ ತಂತ್ರಜ್ಞಾನದ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.

ಫಸಲ್ ಮತ್ತು ಫೈಲೊ ಕಂಪನಿಯ ಪ್ರತಿನಿಧಿಯಿಂದ ಸ್ವಯಂನಿಯಂತ್ರಿದಉಪಕರಣ ಬಳಸಿ ಕೃಷಿಯಲ್ಲಿ ನೀರಿನ ಸಮರ್ಥ ಬಳಕೆ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.
ಅಪರಾಹ್ನ ಖುಷ್ಕಿ ಪ್ರದೇಶದಲ್ಲಿ ನೀರಿನ ಸಮರ್ಥ ಬಳಕೆ ಮಾಡುವಲ್ಲಿ ಯಶಸ್ವಿಯಾದ ಬಬ್ಬೂರಿನ ಜವಳಿ ಫಾರಂನ ಪ್ರಗತಿಪರ ರೈತರಾದ ಡಾ. ಏಕಾಂತಯ್ಯರವರ ಸಮಗ್ರ ಕೃಷಿ ಪದ್ದತಿಯ ತಾಕಿಗೆ ಭೇಟಿ ನೀಡಲಾಗುವುದು.

ಆದ ಪ್ರಯುಕ್ತ, .29 ರಂದು ಹಿರಿಯೂರು ತಾಲ್ಲೂಕಿನ ಆಸಕ್ತ 60 ಜನ ರೈತರಿಗೆ, .30ರಂದು ಚಳ್ಳಕೆರೆ ತಾಲ್ಲೂಕಿನ ಆಸಕ್ತ  60 ಜನ ರೈತರಿಗೆ ಹಾಗೂ .31ರಂದು ಚಿತ್ರದುರ್ಗ ತಾಲ್ಲೂಕಿನ ಆಸಕ್ತ 60 ಜನ ರೈತ ಭಾಂದವರು  ತರಬೇತಿಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ 8277931058 ಗೆ ಕರೆ ಮಾಡಿ ನೊಂದಾಯಿಸಿಕೊಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಕೋರಿದ್ದಾರೆ.

ಮೊದಲು ನೋಂದಾವಣಿ ಮಾಡಿಕೊಂಡ 60 ಜನ ರೈತ ಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಹಾಗೂ ತರಬೇತಿಗೆ ಹಾಜರಾಗುವ ರೈತಬಾಂಧವರು ಕಡ್ಡಾಯವಾಗಿ ತಮ್ಮ ಎಫ್ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿ ತರಬೇಕು ಎಂದು ಕೋರಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";