ಚಂದ್ರವಳ್ಳಿ ನ್ಯೂಸ್, ತುಮಕೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ತುಮಕೂರು ವಿಶ್ವವಿದ್ಯಾನಿಲಯದ ಬಿದರಕಟ್ಟೆಯ ನೂತನ ಜ್ಞಾನಸಿರಿ ಕ್ಯಾಂಪಸ್ಗೆ ಸಾರಿಗೆ ಸೇವೆ ಕಲ್ಪಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ತುಮಕೂರು ನಗರ ಬಸ್ ನಿಲ್ದಾಣದಿಂದ ಜ್ಞಾನಸಿರಿ ಕ್ಯಾಂಪಸ್ಗೆ ಬೆಳಿಗ್ಗೆ ೮:೩೦, ೯, ೯:೩೦, ೧೦, ೧೦:೩೦, ೧೧, ೧೧:೩೦, ೧೨, ಮಧ್ಯಾಹ್ನ ೧:೧೫, ೧:೪೦, ೨:೪೫, ೩, ೩:೦೫, ೩:೩೦, ೪:೧೦, ೪:೩೦ ಗಂಟೆಗೆ ಹಾಗೂ ಜ್ಞಾನಸಿರಿ ಕ್ಯಾಂಪಸ್ನಿಂದ ತುಮಕೂರಿಗೆ ಬೆಳಿಗ್ಗೆ ೯:೪೫, ೧೦:೧೫, ೧೦:೪೫, ೧೧:೧೫, ೧೧:೪೫,
ಮಧ್ಯಾಹ್ನ ೧೨:೧೫, ೧೨:೪೫, ೨, ೨:೨೦, ೩:೩೦, ೩:೪೫, ೪, ೪:೧೫, ೪:೫೫, ೫:೩೦ ಗಂಟೆಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.