ನಿರಾಶ್ರಿತರ ಕೇಂದ್ರದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿರವರ ಹುಟ್ಟು ಹಬ್ಬ ಆಚರಣೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿನ ನಿರಾಶ್ರಿತರಿಗೆ ಸಿಹಿ ಹಾಗೂ ಹಣ್ಣು ಹಂಪಲು ವಿತರಿಸುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿರವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಎಸ್.ಜಿ. ಕಲ್ಯಾಣ ಮಂಟಪ ಮಾಲೀಕರಾದ ಶ್ರೀಮತಿ ಶಕುಂತಲಮ್ಮ, ಗೋವಿಂದರೆಡ್ಡಿ ದಂಪತಿಗಳು ನಿರಾಶ್ರಿತರಿಗೆ ಸಿಹಿ ವಿತರಿಸಿದರು.

- Advertisement - 

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನಕುಮಾರ್ ಕೆ.ಜಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಡಿ.ಟಿ. ರಾಜೇಂದ್ರರೆಡ್ಡಿ, ಎಂ.ಪಿ.ಮಂಜುನಾಥರೆಡ್ಡಿ, ಜಿ.ಹೆಚ್.ವಿಜಯಕುಮಾರ್‌ರೆಡ್ಡಿ, ನ್ಯಾಯವಾದಿ ಸಂಪತ್‌ಕುಮಾರ್, ಎಂ.ಎಸ್.ಗಿರೀಶ್, ಕೆ.ಆರ್.ವೆಂಕಟೇಶ್‌ರೆಡ್ಡಿ, ಅಶ್ವಥನಾರಾಯಣರೆಡ್ಡಿ, ಕೆ.ಟಿ.ಅವಿನಾಶ್‌ರೆಡ್ಡಿ, ಕೆ.ಬಿ.ಸುನೀಲ್‌ಕುಮಾರ್‌ರೆಡ್ಡಿ, ಬಿ.ಎ.ವೆಂಕಟಶಿವರೆಡ್ಡಿ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಮಹದೇವಯ್ಯ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

- Advertisement - 

Share This Article
error: Content is protected !!
";