ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಮಾವಿನಮಡು ಗ್ರಾಮದ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಬಸ್ ಗಳಿಲ್ಲದೆ ತೊಂದರೆಯಾಗುತ್ತಿದ್ದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರಿಗೆ
ಗ್ರಾಮಸ್ಥರು ಮನವಿ ಮಾಡಿದ್ದು ತಕ್ಷಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗ ವಿಭಾಗೀಯ ನಿಯಂತ್ರಣ ಅಧಿಕಾರಿ ವೆಂಕಟೇಶ್ ಅವರಿಗೆ ದೂರವಾಣಿ ಮೂಲಕ ಬಸ್ ಸಂಚಾರ ಆರಂಭಿಸುವಂತೆ ಸೂಚನೆ ನೀಡಿದರು.
ಸಚಿವ ಸೂಚನೆ ಮೇರೆಗೆ ಭಾನುವಾರ ಬೆಳಿಗ್ಗೆ 8 ಗಂಟೆಗೆ ಮಾವಿನಮಡು ಗ್ರಾಮದಿಂದ ಸಾರಿಗೆ ಬಸ್ ಸಂಚಾರ ಆರಂಭಿಸಿ ಕಾರ್ಯಾಚರಣೆ ಮಾಡಿದೆ.
ಈ ವೇಳೆ ಗ್ರಾಮಸ್ಥರು ಸಾರಿಗೆ ಬಸ್ಸಿಗೆ ವಿಶೇಷ ಪೂಜೆ ಸಲ್ಲಿಸಿ ನಿತ್ಯ ಬಸ್ ಸಂಚರಿಸುವಂತೆ ಮನವಿ ಮಾಡಿದರು.
ಸಚಿವ ಡಿ ಸುಧಾಕರ್, ವಿಭಾಗಿಯ ನಿಯಂತ್ರಣಧಿಕಾರಿ ವೆಂಕಟೇಶ್, ಕೆಪಿಸಿಸಿ ಸದಸ್ಯ ಅಮೃತೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಸೇರಿದಂತೆ ಮತ್ತಿತರರಿಗೆ ಮಾವಿನಮಡು ಗ್ರಾಮಸ್ಥರಾದ ದ್ಯಾಮೇಗೌಡ್ರು, ಕಾಂಗ್ರೆಸ್ ಯುವ ಮುಖಂಡ ದೇವೇಗೌಡ, ಮಣಿಕಂಠ, ಅಬ್ದುಲ್ ಸಾಬ್ ಸೇರಿದಂತೆ ಮತ್ತಿತರರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

