ಡಾ.ಜೆ.ಕರಿಯಪ್ಪ ಮಾಳಿಗೆಗೆ ನಡೆ-ನುಡಿ ಗೌರವಾರ್ಪಣೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸರ್ಕಾರಿ ಕಲಾ ಕಾಲೇಜು(ಸ್ವಾಯತ್ತ) ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ ಇವರಿಗೆ ಪತ್ರಕರ್ತರ ಬಳಗ ಹಾಗೂ ಆಶಯ ತಂಡದಿಂದ ಮಾ.೨೯ ರಂದು ಡಾ.ಜೆ.ಕರಿಯಪ್ಪ ಮಾಳಿಗೆ ನಡೆ-ನುಡಿ ಗೌರವಾರ್ಪಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಕ್ರೀಡಾ ಭವನದಲ್ಲಿ ಬೆಳಿಗ್ಗೆ ೧೦-೩೦ ಕ್ಕೆ ಹಮ್ಮಿಕೊಳ್ಳಲಾಗಿದೆ.

ಸಂಸ್ಕೃತಿ ಚಿಂತಕ ಡಾ.ಎಸ್.ನಟರಾಜ್ ಬೂದಾಳು ಕಾರ್ಯಕ್ರಮ ಉದ್ಘಾಟಿಸಿ ತತ್ವಪದ ಮತ್ತು ಅವಧೂತ ಪರಂಪರೆ ಕುರಿತು ಮಾತನಾಡಲಿದ್ದಾರೆ.

- Advertisement - 

ಹಿರಿಯ ಪತ್ರಕರ್ತ ಎಂ.ಎನ್.ಯೋಗೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪಾದನೆ ಕೃತಿಗಳ ಕುರಿತು ವಿಮರ್ಶಕ ಡಾ.ಲೋಕೇಶ್ ಅಗಸನಕಟ್ಟೆ, ಸಂಶೋಧನೆ ಕುರಿತು ಕವಿಯತ್ರಿ ತಾರಿಣಿ ಶುಭದಾಯಿನಿ ಇವರುಗಳು ವಿಶೇಷ ಉಪನ್ಯಾಸ ನೀಡುವರು.

ಹಿರಿಯ ಪತ್ರಕರ್ತ ಶ.ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ವೀರೇಶ್, ಉದ್ಯಮಿ ಟಿ.ವಿ.ಅರುಣ್ ಇವರುಗಳು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಎಚ್.ಜಿ.ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸುವರು.

- Advertisement - 

ಮಧ್ಯಾಹ್ನ ೧೨ ಗಂಟೆಗೆ ಒಡನಾಟದ ಮಾತು ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ವಹಿಸಲಿದ್ದಾರೆ.

ಕವಿ ಚಂದ್ರಶೇಖರ್ ತಾಳ್ಯ, ಕಥೆಗಾರ ಎಸ್.ಗಂಗಾಧರಯ್ಯ ಒಡನಾಟದ ಮಾತುಗಳನ್ನಾಡುವರು. ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ವೀರೇಂದ್ರಕುಮಾರ್ ಕೋಗುಂಡೆಮಠ, ಹಿರಿಯ ಪತ್ರಕರ್ತ ಎಂ.ಜೆ.ತಿಪ್ಪೇಸ್ವಾಮಿ, ಪತ್ರಕರ್ತ ಟಿ.ಎನ್.ಪ್ರಹ್ಲಾದ್ ಇವರುಗಳು ಪಾಲ್ಗೊಳ್ಳುವರು. ಪ್ರಾಧ್ಯಾಪಕ ಡಾ.ಕೆ.ಚಿತ್ತಯ್ಯ ಕಾರ್ಯಕ್ರಮ ನಿರೂಪಿಸುವರು ಎಂದು ಬಳಗದ ಜೋಗಿಮಟ್ಟಿ ಮಹೇಶ್‌ಬಾಬು ತಿಳಿಸಿದ್ದಾರೆ.

 

 

Share This Article
error: Content is protected !!
";