ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಪರಿಷತ್ತಿನ ಸಹಕಾರ ಸಂಘದ ವತಿಯಿಂದ ಇತ್ತೀಚಿಗೆ ದೈವಾದೀನರಾದ ಕಾಗಿನೆಲೆ ಗುರುಪೀಠದ ತಿಂತಿಣಿ ಬ್ರಿಡ್ಜ್ ಶಾಖಾ ಮಠದ ಪೀಠಧಿಪತಿಗಳಾದ ಶ್ರೀ ಸಿದ್ದರಾಮನಂದ ಪುರಿ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮ ಹಾಗೂ 2026ನೇ ಹೊಸವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆ ಕಾರ್ಯಕ್ರಮವನ್ನು ಕನಕ ದಾಸ ವೃತ್ತದಲ್ಲಿ ಹಮ್ಮಿಕೊಳ್ಳಗಿತ್ತು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ರೈಲ್ವೇ ಸ್ಟೇಷನ್ ಎಂ. ಮಲ್ಲೇಶ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತ ರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ವೀರಾಪುರ ಮಾರಣ್ಣ, ವಕೀಲ ಕೃಷ್ಣಮೂರ್ತಿ, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್. ರವಿಕುಮಾರ್, ಮಾಜಿ ಅಧ್ಯಕ್ಷ ವೆಂಕಟೇಶ್,
ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಪಟೇಲ್ ಮುನಿರಾಜ್, ಆಲಹಳ್ಳಿ ಗಂಗರಾಜು, ಮೆಳೇಕೋಟೆ ಕೃಷ್ಣಮೂರ್ತಿ, ಆಟೋ ಮಂಜು, ಅಪ್ಪಾಜಿ, ರವಿ, ಹನುಮಂತರಾಜು, ಕಾರ್ಯದರ್ಶಿ ಮಹಾಲಕ್ಷ್ಮಿ, ಗಂಗಮ್ಮ ಸೇರಿದಂತೆ ಕುರುಬರ ಸಮುದಾಯದ ಹಲವಾರು ಮುಖಂಡರು ಹಾಜರಿದ್ದರು.

