ಭೂಮಿ ಉಸ್ತುವಾರಿ ಕೋಶದ ಸಿಬ್ಬಂದಿಗೆ ಗೌರವ ಸನ್ಮಾನ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ನೀಡುವ ಹಕ್ಕು ಪತ್ರಗಳನ್ನು ಡಿಜಿಟಲ್ ರೂಪದಲ್ಲಿ
, ನೋಂದಣಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಸೂಕ್ತ ತಂತ್ರಾಂಶ ಅಭಿವೃದ್ಧಿಪಡಿಸಿ ಫಲಾನುಭವಿಗಳಿಗೆ ನೇರವಾಗಿ ಸಿಗುವಂತೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ರಾಜ್ಯ ಸರ್ಕಾರ ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂಮಿ ಉಸ್ತುವಾರಿ ಕೋಶದ ತಾಂತ್ರಿಕ ಸಿಬ್ಬಂದಿಗಳಾದ ದೊಡ್ಢಬಳ್ಳಾಪುರದ ರಾಜಶೇಖರ್ ಮತ್ತು  ತಂಡವನ್ನು ಅಭಿನಂದಿಸಿದರು.

 ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯ ರವರು, ಉಪ ಮುಖ್ಯಮಂತ್ರಿಗಳು ಡಿ ಕೆ ಶಿವಕುಮಾರ್ ರವರು, ಕಂದಾಯ ಮಂತ್ರಿಗಳು ಕೃಷ್ಣ ಬೈರೇಗೌಡ, ಆಹಾರ ಇಲಾಖೆಯ ಮಂತ್ರಿಗಳಾದ ಕೆ ಎಚ್ ಮುನಿಯಪ್ಪ ರವರು ಹಾಗೂ ರಾಜ್ಯ ಸರ್ಕಾರದ ಇತರೆ ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

- Advertisement - 

 

- Advertisement - 
Share This Article
error: Content is protected !!
";