ಟ್ರೋಲ್ ಮಾಡಿ ನೆಗೆಟಿವ್ ಕಾಮೆಂಟ್ ಮಾಡೋದು ತುಂಬಾನೇ ತಪ್ಪು-ನಟಿ ರಾಗಿಣಿ

News Desk

ಚಂದ್ರವಳ್ಳಿ ನ್ಯೂಸ್,  ಬೆಂಗಳೂರು :
ಯಾವ ಕೆಲಸ ಮಾಡಬೇಕು
, ಯಾವ ಬಟ್ಟೆ ಹಾಕಬೇಕು, ತಾಯಿ ಆಗಬೇಕು ಎನ್ನುವುದು ಹೆಣ್ಣಿನ ಆಯ್ಕೆ ಎಂದು ನಟಿ ರಾಗಿಣಿ ಹೇಳಿದರು.

- Advertisement - 

ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ಶಿರಡಿ ಸಾಯಿಬಾಬ ದೇವಸ್ಥಾನದಲ್ಲಿ ನಡೆದ ಗುರುಪೂರ್ಣಿಮ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಯ್ತನ ಅನ್ನೋದು ಒಂದು ಅದ್ಬುತ ಅನುಭವ. ಆದರೆ ಅದನ್ನು ಹಾಗೇ ಮಾಡಬೇಕು, ಇದನ್ನು ಹೀಗೇ ಮಾಡಬೇಕು ಅನ್ನೋದು ತಪ್ಪು ಎಂದು ರಾಗಿಣಿ ತಿಳಿಸಿದರು.

- Advertisement - 

ಭಾವನ ಅವರು ಅಮ್ಮ ಆಗ್ತಾ ಇದ್ದಾರೆ. ಅವರಿಗೆ ತುಂಬಾನೇ ಖುಷಿ ಇದೆ. ಆದರೆ ಅದನ್ನು ಜಡ್ಜ್ ಮಾಡಿ, ಟ್ರೋಲ್ ಮಾಡಿ, ನೆಗೆಟಿವ್ ಕಾಮೆಂಟ್ ಮಾಡೋದು ತುಂಬಾನೇ ತಪ್ಪು. ಈ ರೀತಿ ನೆಗೆಟಿವ್ ಕಾಮೆಂಟ್ ಮಾಡೋದನ್ನು ತಕ್ಷಣವೇ ನಿಲ್ಲಿಸಲಿ ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯತ್​ ಸದಸ್ಯರಾದ ಸ್ವಾತಿ ಅವರು ಈ ಗುರುಪೂರ್ಣಿಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಸೊಕ್ಕೆ ಗ್ರಾಮದ ಶಿರಡಿ ಸಾಯಿಬಾಬಾ ಮಂದಿರಕ್ಕೆ ನಟಿ ಭೇಟಿ ನೀಡಿದರು.‌ ಎರಡನೇ ವರ್ಷದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ನಟಿ ರಾಗಿಣಿ ಭಾಗಿಯಾದರು. ಕಾಡುಸಿದ್ದೇಶ್ವರ ಮಠ ನೊಣವಿನಕೆರೆ ಶಿವಯೋಗೀಶ್ವರ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ಸೊಕ್ಕೆ ಗ್ರಾಮಸ್ಥರು ಸೇರಿದಂತೆ ಹಲವು ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

- Advertisement - 

ಇತ್ತೀಚೆಗಷ್ಟೇ ನಟಿ ಭಾವನಾ ಅಭಿಮಾನಿಗಳೊಂದಿಗೆ ಶುಭ ಸುದ್ದಿ ಹಂಚಿಕೊಂಡರು. 40ನೇ ವಯಸ್ಸಿನಲ್ಲಿ ಭಾವನಾ ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದಾರೆ. ಐವಿಎಫ್‌ (IVF) ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳನ್ನು ಪಡೆಯುತ್ತಿರುವುದಾಗಿ ಇತ್ತೀಚೆಗೆ ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಅಭಿಮಾನಿಗಳಿಗೆ ಮಾಹಿತಿ ಒದಗಿಸಿದ್ದರು.

 

Share This Article
error: Content is protected !!
";