ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಮೇರಿಕಾ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಆಪ್ತಮಿತ್ರ‘ ಎಂದೇ ಬಿಂಬಿಸಿಕೊಂಡಿರುವ ಮೋದಿಯವರನ್ನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವ ಬೆನ್ನಲ್ಲೇ, ಅಧಿಕಾರ ಹಿಡಿಯುತ್ತಿದ್ದಂತೆಯೇ ಭಾರತಕ್ಕೆ ಮತ್ತೊಂದು ಮರ್ಮಾಘಾತ ನೀಡಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಅಮೇರಿಕಾದಲ್ಲಿ ಭಾರತ ಮೂಲದವರ ಜನ್ಮಸಿದ್ಧ ಪೌರತ್ವ ರದ್ದು ಮಾಡುವ ಆದೇಶ ಹೊರಡಿಸಲಾಗಿದೆ! ಇದರಿಂದಾಗಿ 7.50 ಲಕ್ಷ ಭಾರತೀಯರು ಅಮೆರಿಕಾ ದೇಶ ಬಿಡಬೇಕಾದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೇ ಭಾರತದ ರಪ್ತಿನ ಮೇಲೆ 100% ತೆರಿಗೆ ವಿಧಿಸುವ ಎಚ್ಚರಿಕೆ ನೀಡಿದ್ದಾರೆ ಟ್ರಂಪ್!
‘ಆಪ್ತಮಿತ್ರ‘ನ ಮೇಲೂ ‘ಕೆಂಗಣ್ಣು‘ ಬೀರುವ ಎದೆಗಾರಿಕೆ ತೋರುತ್ತಾರಾ ‘ಸ್ವಯಂ ಘೋಷಿತ ವಿಶ್ವ ನಾಯಕ‘ ಮೋದಿ?! ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.