ಸಹೋದರನಾಗಿ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನ-ಡಿಸಿಎಂ ಪವನ್​ ಕಲ್ಯಾಣ್

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ಬೆಂಗಳೂರಿಗೆ ಆಹಾರ ನೀಡುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳು ಅಕ್ಷಯ ಪಾತ್ರೆಯಾಗಿದ್ದು
, ಇಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಸಹೋದರನಾಗಿ ಪ್ರಯತ್ನ ಮಾಡುವೆ ಎಂದು ಆಂಧ್ರ ಪ್ರದೇಶ ಡಿಸಿಎಂ ಪವನ್​ ಕಲ್ಯಾಣ್ ಭಾವುಕರಾಗಿ ತಿಳಿಸಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಪರಸ್ಪರ ಗೌರವದಿಂದ ಕೂಡಿದೆ. ಕಲೆ ಮತ್ತು ಸಂಸ್ಕೃತಿ ನಮ್ಮನ್ನ ಒಂದೂಗಿಡಿಸಬೇಕೇ ವಿನಃ ಬೇರ್ಪಡಿಸಿಬಾರದು. ನಾವೆಲ್ಲ ಭಾರತ ಮಾತೆಯ ಮಕ್ಕಳು ಎಂದು ಆಂಧ್ರ ಪ್ರದೇಶ ಡಿಸಿಎಂ ಪವನ್​ ಕಲ್ಯಾಣ್ ತಿಳಿಸಿದರು.

- Advertisement - 

ಕರ್ನಾಟಕ ಪ್ರಜೆಗಳಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಅವರು, ಕರ್ನಾಟಕವು ಅದ್ಭುತ ಪರಂಪರೆ, ಸಂಸ್ಕೃತಿಯ ನಾಡು. ಚಿಂತಾಮಣಿಗೆ ಬಂದಿರೋದು ಗೌರವದ ವಿಷಯ ಎಂದು ಪವನ್​ ಕಲ್ಯಾಣ್​ ಹೇಳುತ್ತಿದ್ದಂತೆ ನೆರೆದಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ಜೈಕಾರ ಹಾಕಿದ್ದಾರೆ.

 

- Advertisement - 

 

Share This Article
error: Content is protected !!
";