ಟಿಟಿ ಡ್ರೈವರ್ ಪ್ರವಾಸಿಗರನ್ನು ಕರೆತಂದಾಗ ಹೃದಯಾಘಾತದಿಂದ ಸಾವು

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಚಿಕ್ಕಮಗಳೂರಿನಲ್ಲಿ ಟಿಟಿ ಡ್ರೈವರ್‌ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಟಿಟಿ ಡ್ರೈವರ್ ಚಿಕ್ಕಮಗಳೂರಿಗೆ ಪ್ರವಾಸಿಗರನ್ನು ಕರೆತಂದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅವಿನಾಶ್ (25) ಮೃತ ದುರ್ದೈವಿ. ಬೆಂಗಳೂರಿನ ಸೋಮನಹಳ್ಳಿ ಮೂಲದ ಅವಿನಾಶ್ ಮೂರು ವರ್ಷದ ಹಿಂದೆ ಮದುವೆಯಾಗಿದ್ದು, 2 ವರ್ಷದ ಮಗು ಇದೆ. ಪ್ರವಾಸಿಗರನ್ನು ಹೋಂ ಸ್ಟೇ ಬಳಿ ಬಿಟ್ಟು ಬಂದ ಬಳಿಕ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ.

ಕೂಡಲೇ ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
error: Content is protected !!
";