ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನೆಯೊಂದು ಮೂರು ಬಾಗಿಲಾಗಿರುವ ಕರ್ನಾಟಕ ಕಾಂಗ್ರೆಸ್ ಇದೀಗ ಮತ್ತೊಂದು ಬಾಗಿಲು ಓಪನ್‌ಮಾಡಿಕೊಂಡು ಬೀದಿ ಕಾಳಗಕ್ಕೆ ನಿಂತಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ತುಮಕೂರು ಜಿಲ್ಲೆಯ ಇಬ್ಬರು ಸಚಿವರಾದ ಕೆ.ಎನ್. ರಾಜಣ್ಣ ಹಾಗೂ ಡಾ.ಜಿ.ಪರಮೇಶ್ವರ ಅವರ ತುಘಲಕ್‌ದರ್ಬಾರ್‌ವಿರುದ್ಧ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್‌ಸಿಡಿದೆದ್ದಿದ್ದಾರೆ.
ಗುಬ್ಬಿ ಶ್ರೀನಿವಾಸ್‌ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ಕೊಟ್ಟು ಕಾಂಗ್ರೆಸ್‌ಸೇರಿಸಿಕೊಂಡ ನಾಯಕರು ಚೊಂಬು ಕೊಟ್ಟಿದ್ದಾರೆ!! ಎಂದು ಬಿಜೆಪಿ ಆರೋಪಿಸಿದೆ.
ಇದೀಗ ತುಮಕೂರು ಹಾಲು ಒಕ್ಕೂಟ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ತಮ್ಮ ಪತ್ನಿಗೆ ನೀಡುವಂತೆ ಕೇಳಿದಾಗ ಕಾಂಗ್ರೆಸ್‌ನಾಯಕರು ಕೈಗೆ ಚಿಪ್ಪು ಕೊಟ್ಟಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.