ಕನ್ನಡಿಗರಿಗೆ ಶೇ 80 ರಷ್ಟು ಉದ್ಯೋಗ ನೀಡಲು ಕೇಂದ್ರ ಸಚಿವ ಕುಮಾರಸ್ವಾಮಿಗೆ ಮನವಿ ಮಾಡಿದ ತುಕಾರಾಮ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನವದೆಹಲಿಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಸಂಸದ ಈ.ತುಕಾರಾಮ್ ರವರು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಕೇಂದ್ರ ಉಕ್ಕು ಸಚಿವರಾದ  ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿಮಲೈಯಲ್ಲಿರುವ ಕೇಂದ್ರ ಸರ್ಕಾರದ ಸ್ವಮ್ಯಕ್ಕೆ ಒಳಪಟ್ಟಿರುವ NMDC ಕೈಗಾರಿಕಾ ಕಂಪನಿಯಲ್ಲಿ ಈ ಹಿಂದೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಕರ್ನಾಟಕದವರಿಗೆ ಉದ್ಯೋಗ ನೀಡದೆ,

- Advertisement - 

ತಾರತಮ್ಯ ಮಾಡಿರುವ ಬಗ್ಗೆ ಹಾಗೂ ಮುಂದಿನ ಎಲ್ಲಾ ನೇಮಕಾತಿಗಳಲ್ಲಿ  ಕರ್ನಾಟಕ ಕೈಗಾರಿಕಾ ನೀತಿ ಮತ್ತು ಸರೋಜಿನಿ ಮಹಿಷಿ ವರದಿ ಅನುಸಾರ ಕನ್ನಡಿಗರಿಗೆ ಶೇ 80 ಮತ್ತು ಶೇ 65 ರಷ್ಟು ಉದ್ಯೋಗ ನೀಡುವ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

 

- Advertisement - 

 

Share This Article
error: Content is protected !!
";