ತುಮಕೂರು ಹಾಗೂ ಚಿತ್ರದುರ್ಗ ಮೇನ್ ಕೆನಾಲ್ ಕಾಮಗಾರಿ ಕುಂಠಿತ-ಮುಖ್ಯ ಇಂಜಿನಿಯರ್ ಲಮಾಣಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭದ್ರಾ ಮೇಲ್ದಂಡೆ ಯೋಜನೆ ವಿಶ್ವೇಶ್ವರ ಜಲ ನಿಗಮ ಕಚೇರಿಯಲ್ಲಿ ರೈತ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಭದ್ರಾ ಮೇಲ್ದಂಡೆ ಕಾಮಗಾರಿ ಕುರಿತು ಸಭೆ ನಡೆಸಲಾಯಿತು.

ರೈತರಿಗೆ ಕಾಮಗಾರಿ ಕುರಿತು ಮುಖ್ಯ ಇಂಜಿನಿಯರ್ ಲಮಾಣಿ ಮಾತನಾಡಿ ಮೊದಲ ಹಂತದ ತುಂಗಾಯಿಂದ ಭದ್ರಾದವರೆಗಿನ ಕಾಮಗಾರಿ 2008ರಲ್ಲಿ ಪ್ರಾರಂಭವಾಗಿ ಅನೇಕ ಅಡೆತಡೆಗಳಿಂದ ಮತ್ತು ಅರಣ್ಯ ಇಲಾಖೆಯ ಅನುಮತಿ ವಿಳಂಬ ಹಾಗೂ ಅಲ್ಲಿ ಅತಿ ಹೆಚ್ಚು ಮಳೆ ಬೀಳುವುದರಿಂದ ಬೇಸಿಗೆ ಕಾಲದಲ್ಲಿ ಮಾತ್ರ ಕೆಲಸ ಮಾಡಲಾಗುತ್ತದೆ. ಈಗ ಶೇ. 70 ಭಾಗ ಕಾಮಗಾರಿ ಮುಗಿದಿದ್ದು ಇನ್ನೂ ಒಂದು ವರ್ಷದೊಳಗಾಗಿ ಎಲ್ಲಾ ಕೆಲಸ ಮುಗಿಸುವ ಪ್ರಯತ್ನ ಮಾಡುತ್ತೀವಿ. ಭದ್ರಾದಿಂದ ಈಗ 54 km ಕೆಲಸ ಮುಗಿದಿದ್ದು ವೈ ಜಂಕ್ಷನ್ ನಿಂದ ತುಮಕೂರು ಮೇನ್ ಕೆನಾಲ್ ಹಾಗೂ ಚಿತ್ರದುರ್ಗ ಮೇನ್ ಕೆನಾಲ್ ಕೆಲವು ಭಾಗಗಳಲ್ಲಿ ರೈತರಿಗೆ ಪರಿಹಾರ ನೀಡುವ  ಸಮಸ್ಯೆಯಿಂದ ಕಾಮಗಾರಿ ಕುಂಠಿತವಾಗಿದೆ ಇದರ ಜೊತೆಯಲ್ಲಿ ಹನಿ ನೀರಾವರಿ ಪದ್ಧತಿ ಟ್ರಿಪ್ ಇರಿಗೇಶನ್ ಕಾಮಗಾರಿಯನ್ನು ಮಾಡಲಾಗುತ್ತದೆ ಈ ಕಾಮಗಾರಿಯಲ್ಲಿ ರೈತರ ಜಮೀನುಗಳಿಗೆ  ಜೂನ್ 15ರಿಂದ ಅಕ್ಟೋಬರ್ 15 ರವರೆಗೆ ಡ್ರಿಪ್ಪಲ್ಲಿ ನೀರು ಹರಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ರಾಜ್ಯ ಕಾರ್ಯಾಧ್ಯಕ್ಷ ಈಚೆಗಟ್ಟ ಸಿದ್ಧವೀರಪ್ಪ ಮಾತನಾಡಿ ಈ ಯೋಜನೆ ಬಯಲು ಸೀಮೆಗೆ ನೀರು ಉಣಿಸಬೇಕು ಎಂಬ ಕಾಮಗಾರಿ ಪ್ರಾರಂಭ ಮಾಡಿ 16  ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸದೆ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಇದನ್ನೇ ಅಸ್ತ್ರ ಮಾಡಿಕೊಂಡು ಚುನಾವಣೆ ಆರಿಸಿ ಬಂದ ಒಂದೊಂದು ಸರ್ಕಾರವು ಅಡಿಗಲ್ಲು ಹಾಕುತ್ತಾ ಹುಟ್ಟುತ್ತಾ ಸಾಗುತ್ತಿದೆ. ಯಾವುದೋ ಒಂದು ನೆಪ ಇಟ್ಟುಕೊಂಡು ಯೋಜನೆಯ ಗಾತ್ರ ಹೆಚ್ಚಾಗುತ್ತಿದೆ ಹೊರತು ನೀರು ಹರಿಸಲಿಲ್ಲ. ಅನೇಕ ರೀತಿಯ ಚಳುವಳಿಗಳನ್ನು ನಡೆಸುತ್ತಾ ಬಂದರೂ ಚಳುವಳಿ ನಡೆದಾಗ ಮಾತ್ರ ಕಾಮಗಾರಿ ಚುರುಕು ಕೊಳ್ಳುತ್ತದೆ ನಂತರ ತಂತಾನೆ ನಿಧಾನ ಗತಿಯಲ್ಲಿ ಸಾಗುತ್ತಿದೆ ಆದ್ದರಿಂದ ಈ ಯೋಜನೆಯಲ್ಲಿ ಕೆಲಸ ಮಾಡುವ ಎಲ್ಲಾ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಈ ಭಾಗಕ್ಕೆ ನೀರು ಹರಿಸಬೇಕು ಎಂದು ತಿಳಿಸಿದರು.

ಹಿರಿಯೂರು ತಾಲೂಕು ರೈತ ಸಂಘದ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ಮಾತನಾಡಿ ಈ ಯೋಜನೆಗೆ ಈಗಾಗಲೇ ಖರ್ಚಾಗಿರುವ ಹಣ ಎಷ್ಟು. ಗುತ್ತಿಗೆದಾರರಿಗೆ ಇನ್ನು ಎಷ್ಟು ಹಣ ಕೊಡಬೇಕಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 5,300 ಕೋಟಿ ಹಣವನ್ನು ಬಿಡುಗಡೆ ಮಾಡಿಲ್ಲ ರಾಜ್ಯ ಸರ್ಕಾರ ಈ ವರ್ಷದ ಬಜೆಟ್ ನಲ್ಲಿ ಹಣ ಇಟ್ಟಿಲ್ಲ. ಮೊದಲು ಮೊದಲೇ ಹಂತದ ಕಾಮಗಾರಿ ಪೂರ್ಣಗೊಳ್ಳಲಿ ಅನಂತರ ಎರಡನೇ ಹಂತದ ಕಾಮಗಾರಿ ಮುಗಿಸಿ ಕೆರೆಗಳಿಗೆ ನೀರು ತುಂಬಿಸಬೇಕು ಜಿಲ್ಲೆಯಲ್ಲಿ ಬಹುತೇಕ ಭಾಗ ಅಂತರ್ಜಲ ಕುಸಿತದಿಂದ ಕುಡಿಯುವ ನೀರಿಗೂ ಮತ್ತು ರೈತರ ಜಮೀನಿಗೆ ನೀರು ಆಯಸಲು ತುಂಬಾ ಕಷ್ಟವಾಗುತ್ತಿದೆ ಮೊದಲನೇ ಅಂತ ಮತ್ತು 2ನೇ ಹಂತದ ಕಾಮಗಾರಿ ಮುಗಿದ ನಂತರ ಡ್ರಿಪ್ ಇರಿಗೇಶನ್ ಕಾಮಗಾರಿ ಪ್ರಾರಂಭಿಸಿ ನೀವು ಈ ಎರಡು ಹಂತದ ಕಾಮಗಾರಿ ಮುಗಿಸುವವರೆಗೆ ಡ್ರಿಪ್ ಇರಿಗೇಶನ್ ಸಂಪೂರ್ಣ ಆಳಾಗಿ ಹೋಗುತ್ತದೆ ಮತ್ತು ನೀವು ಮಳೆಗಾಲದಲ್ಲಿ ಡ್ರಿಪ್ ಅಲ್ಲಿ ನೀರು ಹರಿಸಿದರೆ ಯಾರಿಗೂ ಪ್ರಯೋಜನವಿಲ್ಲ ಅಂತರ್ಜಲ ಅಭಿವೃದ್ಧಿಯು ಆಗುವುದಿಲ್ಲ ಆದ್ದರಿಂದ ಎಲ್ಲಾ ತಾಲೂಕುಗಳಲ್ಲಿರುವ ಎಲ್ಲಾ ಮಣ್ಣಿನ ಕೆರೆಗಳಿಗೂ ನೀರು ತುಂಬಿಸಿ ಮತ್ತು ವಾಣಿವಿಲಾಸ ಜಲಾಶಯದಲ್ಲಿ 130 ಅಡಿ ನೀರು ಸಂಗ್ರಹವಾಗುವ ಜಲಾಶಯವಿದೆ ಅಲ್ಲಿ ಸಂಗ್ರಹಿಸಿ ಬೇಸಿಗೆ ನಾಲ್ಕೈದು ತಿಂಗಳಲ್ಲಿ ನೀರು ಹರಿಸಿದರೆ ರೈತರಿಗೆ ಉಪಯೋಗವಾಗುತ್ತದೆ ಆದ್ದರಿಂದ ಈಗ ನಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಿ ಯೋಜನೆಯಲ್ಲಿ ತಿದ್ದುಪಡಿ ಮಾಡಿಕೊಂಡು  ಕಾಮಗಾರಿ ನಡೆಸಿಎಂದು ಆಗ್ರಹಿಸಿದರು.
ಡ್ರಿಪ್ ಇರಿಗೇಶನ್ ಕಾಮಗಾರಿ ನಡೆಸುವ ಸಂದರ್ಭದಲ್ಲಿ ರೈತರಿಗೆ ಯಾವುದೇ ನೋಟಿಸ್ ನೀಡದೆ ರೈತರಿಗೆ ತಿಳುವಳಿಕೆ ಪತ್ರ ಸಹ ನೀಡಲಿ ಏಕಾಏಕಿ ರೈತನ ಭೂಮಿಯಲ್ಲಿ 10 ಅಡಿ ಹಾಳ ಹತ್ತು ಅಡಿ ಅಗಲ ಗುಂಡಿ ತೋಡಿದರೆ ರೈತನ ಭೂಮಿ ಬರಡಾಗುತ್ತದೆ ಕಂದಾಯ ಇಲಾಖೆಯ ನಿಯಮ ಪ್ರಕಾರ ಅನುಮತಿ ಇಲ್ಲದೆ  ಜಮೀನಿಗೆ ಪ್ರವೇಶವಿಲ್ಲ ಎಂಬ ನಿಯಮವಿದ್ದರೂ ಇದನ್ನು ಉಲ್ಲಂಘನೆ ಮಾಡಲಾಗುತ್ತದೆ ಆದ್ದರಿಂದ ನಮ್ಮ ಸಭೆಯ ನಡವಳಿಯನ್ನು ಸರ್ಕಾರಕ್ಕೆ ಸಲ್ಲಿಸಿ ಸರ್ಕಾರದಿಂದ ಮಾರ್ಪಾಡು ಆಗುವವರೆಗೂ ಕಾಮಗಾರಿಯ ನಿಲ್ಲಿಸಬೇಕು ಎಂದು ತಿಳಿಸಿದರು.

 ಸಭೆಯಲ್ಲಿ ಆಲೂರು ಸಿದ್ದರಾಮಣ್ಣ, ಚಿತ್ರದುರ್ಗ ತಾಲೂಕ್ ಮಂಜುನಾಥ್, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಡಿಎಸ್ ಹಳ್ಳಿ,  ಚಿತ್ರದುರ್ಗ ತಾಲೂಕ್ ಅಧ್ಯಕ್ಷ ಮಂಜುನಾಥ್, ಜಯಣ್ಣ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ರಂಗಸ್ವಾಮಿ, ಸತೀಶ್, ಶ್ರೀನಿವಾಸ,  ಸತೀಶ್, ಇಂಧೂದರ, ಮಾದಣ್ಣ, ಪ್ರಸನ್ನ, ಸದಾಶಿವಪ್ಪ, ಚಂದ್ರ ಮೌಳಿ, ನಿರಂಜನ್ ಮೂರ್ತಿ, ಹೊಸದುರ್ಗ ತಾಲೂಕು ಅಧ್ಯಕ್ಷ ಬೋರೇಶ, ಕಾರ್ಯದರ್ಶಿ ಶಶಿಧರ HR ಹರೇನಹಳ್ಳಿ ಇದ್ದರು.

- Advertisement -  - Advertisement -  - Advertisement - 
Share This Article
error: Content is protected !!
";