ಭೋವಿ ಸಮಾಜದಿಂದ ಸನ್ಮಾನಕ್ಕೊಳಗಾದ ತುಮುಲ್ ಅಧ್ಯಕ್ಷ ವೆಂಕಟೇಶ್‌

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು :
ತುಮಕೂರು ನಗರದಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ವಿ.ವೆಂಕಟೇಶ್‌ರವರ ಮನೆಗೆ ತುಮಕೂರು ಜಿಲ್ಲೆಯ ಭೋವಿ ಸಮಾಜದ ಕೆಲ ಮುಖಂಡರು ತೆರಳಿ ಅಭಿನಂದಿಸಿದರು.

ಅಭಿನಂದನೆಗಳನ್ನು ಸಲ್ಲಿಸಿ ಉದ್ಯಮಿ, ಭೋವಿ ಸಮಾಜದ ಮುಖಂಡರು, ಸಮಾಜ ಸೇವಕರಾದ ಗೋಲ್ಡ್ ದೀಪು ಮಾತನಾಡಿ ನಮ್ಮ ಭೋವಿ ಸಮುದಾಯವು ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ಇಂತಹ ಸಮುದಾಯದಲ್ಲಿ ಹುಟ್ಟಿದಂತಹ ಕೆಲವಷ್ಟೇ ಮಂದಿ ಮಾತ್ರ ಸಮಾಜಮುಖಿಯಾಗಿ ಹಾಗೂ

- Advertisement - 

ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಲು ಸಾಧ್ಯ ಅದರಂತೆ ಇತ್ತೀಚೆಗೆ ನಡೆದ ತುಮುಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆ ಪ್ರಯುಕ್ತ ಇಂದು ನಮ್ಮ ಸಮಾಜದ ಮುಖಂಡರುಗಳೊಂದಿಗೆ ಶಾಸಕರು ಹಾಗೂ ತುಮುಲ್ ಅಧ್ಯಕ್ಷರಾದ ಹೆಚ್.ವಿ.ವೆಂಕಟೇಶ್‌ರವರನ್ನು ಇಂದು ಅಭಿನಂದಿಸುತ್ತಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭೋವಿಪಾಳ್ಯ ಉಮೇಶ್, ಆಕಾಶ್, ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

- Advertisement - 

 

 

 

Share This Article
error: Content is protected !!
";