ತುಂಗಭದ್ರಾ ಜಲಾಶಯಕ್ಕೆ ಕಾಯಕಲ್ಪ: ಮೇ ಅಂತ್ಯದೊಳಗೆ 32 ಹೊಸ ಕ್ರಸ್ಟ್ ಗೇಟ್‌ ಅಳವಡಿಕೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ​ಹೊಸಪೇಟೆ:
ತುಂಗಭದ್ರಾ ಜಲಾಶಯದ ಸುರಕ್ಷತೆ ಮತ್ತು ಆಯಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೆತ್ತಿಕೊಳ್ಳಲಾದ 32 ಹೊಸ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯವು ಯುದ್ಧೋಪಾದಿಯಲ್ಲಿ ಸಾಗುತ್ತಿದ್ದು, ಮೇ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಆಂಧ್ರಪ್ರದೇಶದ ಹಣಕಾಸು ಸಚಿವ ಪಾಯವುಲ ಕೇಶವ ತಿಳಿಸಿದ್ದಾರೆ.

​ಮಂಗಳವಾರ ಹೊಸಪೇಟೆ ಸಮೀಪದ ಅಣೆಕಟ್ಟೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

- Advertisement - 

​50 ವರ್ಷಗಳ ಸುದೀರ್ಘ ಬಾಳಿಕೆ: ಹೊಸ ಗೇಟ್‌ಗಳ ಅಳವಡಿಕೆಯಿಂದಾಗಿ ಜಲಾಶಯದ ಆಯಸ್ಸು ಕನಿಷ್ಠ 50 ವರ್ಷಗಳ ಕಾಲ ಹೆಚ್ಚಾಗಲಿದ್ದು, ಅಣೆಕಟ್ಟು ಮತ್ತಷ್ಟು ಭದ್ರವಾಗಲಿದೆ.

​ತಜ್ಞರ ಸಲಹೆ ಮೇರೆಗೆ ಕ್ರಮ: ಈ ಹಿಂದೆ 19ನೇ ಕ್ರಸ್ಟ್ ಗೇಟ್ ಕಳಚಿ ಬಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಜಲಾಶಯ ಸುರಕ್ಷತಾ ಪ್ರಾಧಿಕಾರದ ತಜ್ಞರ ಸೂಚನೆಯಂತೆ ಎಲ್ಲ ಹಳೆಯ ಗೇಟ್‌ಗಳನ್ನು ತೆಗೆದು ಹೊಸದನ್ನು ಅಳವಡಿಸಲಾಗುತ್ತಿದೆ.

- Advertisement - 

​ರೈತರಿಗೆ ಆಶಾಕಿರಣ: ಮುಂಬರುವ ಮುಂಗಾರು ಮಳೆ ಚುರುಕಾಗುವ ಮುನ್ಸೂಚನೆ ಇರುವುದರಿಂದ, ಮೇ ಅಂತ್ಯದೊಳಗೆ ಕಾಮಗಾರಿ ಮುಗಿಸಿ ರೈತರ ಹಿತರಕ್ಷಣೆ ಮಾಡುವುದು ಸರ್ಕಾರದ ಗುರಿಯಾಗಿದೆ.

​”ಟಿಬಿ ಡ್ಯಾಂಗೆ ಸಂಬಂಧಿಸಿದ ಮೂರೂ ರಾಜ್ಯಗಳು (ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ) ಈಗಾಗಲೇ ತಮ್ಮ ಪಾಲಿನ ಅನುದಾನವನ್ನು ಒದಗಿಸಿವೆ. ಅಗತ್ಯ ಬಿದ್ದರೆ ಆಂಧ್ರ ಸರ್ಕಾರ ಹೆಚ್ಚಿನ ಧನಸಹಾಯ ನೀಡಲು ಸಿದ್ಧವಿದೆ.”
ಪಾಯವುಲ ಕೇಶವ, ಹಣಕಾಸು ಸಚಿವ, ಆಂಧ್ರಪ್ರದೇಶ

​ತಾಂತ್ರಿಕ ಸ್ವಾಯತ್ತತೆ:
​ಅನುದಾನ ವಿನಿಯೋಗ ಮತ್ತು ತಾಂತ್ರಿಕ ನಿರ್ಧಾರಗಳಲ್ಲಿ ಯಾವುದೇ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಈ ಸಂಪೂರ್ಣ ಜವಾಬ್ದಾರಿಯನ್ನು ತುಂಗಭದ್ರಾ ಮಂಡಳಿ ನಿರ್ವಹಿಸುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

​ಈ ಸಂದರ್ಭದಲ್ಲಿ ಆಂಧ್ರ ಸರ್ಕಾರದ ಮುಖ್ಯ ಸಚೇತಕ ಕಲವಾ ಶ್ರೀನಿವಾಸಲು, ಟಿಬಿ ಮಂಡಳಿ ಕಾರ್ಯದರ್ಶಿ ಓ.ಆರ್.ಕೆರೆಡ್ಡಿ ಹಾಗೂ ಹಿರಿಯ ಅಭಿಯಂತರರು ಉಪಸ್ಥಿತರಿದ್ದರು.

 

 

Share This Article
error: Content is protected !!
";