ಇಬ್ಬರು ಸಿಪಿಐ, ಒಬ್ಬರು ಡಿವೈಎಸ್ಪಿ ವರ್ಗಾವಣೆ

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:

- Advertisement - 

ಪೊಲೀಸ್ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪರ್ವ ಶುರುವಾಗಿದೆ ಇಂದು ಬಂದ ಪಟ್ಟಿಯಲ್ಲಿ ಶಿವಮೊಗ್ಗದ ಇಬ್ಬರು ಇನ್ಸ್ಪೆಕ್ಟರ್ಗಳು ಹಾಗೂ ಲೋಕಾಯುಕ್ತದಲ್ಲಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಈಶ್ವರ್ ನಾಯ್ಕ್ ವರ್ಗಾವಣೆ ಆಗಿದೆ.

- Advertisement - 

 

ಶಿವಮೊಗ್ಗದ ಸಿಇಎನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಟೆ ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿಯಾಗಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದೀಪಕ್ ಎಂಎಸ್ ಅವರನ್ನು ಕುಂಸಿ ಠಾಣೆಗೆ ಕುಂಸಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಪಟೇಲ್ ಅವರನ್ನು ಕೋಟೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

- Advertisement - 

 

ಹಾಗೆ ಲೋಕಾಯುಕ್ತದಲ್ಲಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಈಶ್ವರ್ ನಾಯ್ಕ್ ಅವರನ್ನು ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು ಆದರೆ ಅವರನ್ನು ಚಿತ್ರದುರ್ಗದ ಸಿಇಎನ್ ವರ್ಗಾವಣೆ ಮಾಡಲಾಗಿದೆ.

 

Share This Article
error: Content is protected !!
";