ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬಬ್ಬೂರು ಫಾರ್ಮ್ ವತಿಯಿಂದ ರಾಜ್ಯ ವಲಯ ಯೋಜನೆಯಡಿ ‘ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ‘ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 26 ಮತ್ತು 27ರಂದು ಒಂದು ದಿನದ ಪ್ರತ್ಯೇಕ ಎರಡು ಸಾಂಸ್ಥಿಕ ತರಬೇತಿ ಹಾಗೂ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯ ಪ್ರಮುಖಾಂಶಗಳು:
ಈ ಕಾರ್ಯಗಾರದಲ್ಲಿ ಕೃಷಿ ರಂಗದ ಖ್ಯಾತ ತಜ್ಞರು ವಿವಿಧ ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಲಿದ್ದಾರೆ.
ಜಿಕೆವಿಕೆ ನಿವೃತ್ತ ಪ್ರಾಧ್ಯಾಪಕ ಡಾ. ಮೋಹನ್ ರಾವ್: ಕೃಷಿ ಮತ್ತು ತರಕಾರಿ ಬೆಳೆಗಳಲ್ಲಿ ದೇಸಿ ತಳಿಗಳ ಸಂರಕ್ಷಣೆಯ ಪ್ರಾಮುಖ್ಯತೆ.
ಕತ್ತಲಗೆರೆ ಸಹಾಯಕ ಪ್ರಾಧ್ಯಾಪಕ ಡಾ. ನಿರಂಜನ್: ಭತ್ತದಲ್ಲಿ ಸಾಂಪ್ರದಾಯಿಕ ತಳಿಗಳ ಸಂರಕ್ಷಣೆಯ ಮಹತ್ವ.
ಬಬ್ಬೂರು ಫಾರ್ಮ್ ಕೆವಿಕೆ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಸಿ. ನಂದಿನಿ: ಸಿರಿಧಾನ್ಯಗಳ ತಳಿ ವೈವಿಧ್ಯತೆ ಹಾಗೂ ಕೃಷಿ ಪದ್ಧತಿಗಳು.
ಸಹಜ ಸಮೃದ್ಧ ಸಂಸ್ಥೆಯ ಕೇಶವಮೂರ್ತಿ ಸಿ.ಎಸ್: ವಿವಿಧ ತರಕಾರಿ ಬೆಳೆಗಳಲ್ಲಿ ದೇಸಿ ಬಿತ್ತನೆ ಬೀಜಗಳ ಸಂರಕ್ಷಣೆ ಮತ್ತು ಪದ್ಧತಿಗಳು.
ವಸ್ತು ಪ್ರದರ್ಶನ ಮತ್ತು ಮಾರಾಟ:
ಮೈಸೂರಿನ ‘ಸಹಜ ಸೀಡ್ಸ್‘ ವತಿಯಿಂದ ವಿವಿಧ ಬೆಳೆಗಳ ದೇಸಿ ತಳಿಗಳ ಬಿತ್ತನೆ ಬೀಜಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.
ಉಚಿತ ಬೀಜದ ಕಿಟ್: ಮೊದಲು ನೋಂದಾಯಿಸಿಕೊಂಡ 50 ರೈತರಿಗೆ ವಿವಿಧ ದೇಸಿ ತರಕಾರಿ ಬೀಜಗಳ ಕಿಟ್ ಅನ್ನು ವಿತರಿಸಲಾಗುವುದು.
ನೋಂದಣಿ ಮಾಹಿತಿ:
ಚಿತ್ರದುರ್ಗ ಜಿಲ್ಲೆಯ ದೇಸಿ ತಳಿ ಸಂರಕ್ಷಣೆ ಮಾಡುತ್ತಿರುವ ಅಥವಾ ಆಸಕ್ತಿ ಹೊಂದಿರುವ ರೈತರು ತಕ್ಷಣವೇ ನೋಂದಾಯಿಸಿಕೊಳ್ಳಲು ಕೋರಲಾಗಿದೆ.ಸಂಪರ್ಕಿಸಬೇಕಾದ ಸಂಖ್ಯೆ: 8277931058
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನಿಕಾಂತ ನೋಂದಾಯಿಸಿಕೊಳ್ಳಲು ಕೋರಿದ್ದಾರೆ.
ಗಮನಿಸಿ: ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವ ಕೇವಲ 50 ರೈತರಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಕೂಡಲೇ ದೂರವಾಣಿ ಕರೆ ಮಾಡುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

