ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲ್ಲೂಕಿನ ಕಾಲುವೇಹಳ್ಳಿ-ವಿಶ್ವೇಶ್ವರಪುರ ಮಾರ್ಗಮಧ್ಯದ ರಸ್ತೆಯಲ್ಲಿ ಮೋಟಾರ್ ಬೈಕ್‌ನಲ್ಲಿ ವೇಗವಾಗಿ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಗುಂಡಿಗೆ ಬಿದ್ದು ಬೈಕ್ ಪಲ್ಟಿಯಾದ ಹಿನ್ನೆಲೆಯಲ್ಲಿ ಸವಾರರಾದ ಕಾಲುವೇಹಳ್ಳಿಯ ಕೆ.ಟಿ.ಪ್ರಕಾಶ್(೩೩), ಮಧುಸೂಧನ್(೩೮) ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಗ್ರಾಮದ ಕೆ.ಜಿ ತಿಪ್ಪೇಸ್ವಾಮಿ ಈ ಬಗ್ಗೆ ದೂರು ನೀಡಿ, ಮೃತಪಟ್ಟ ಕೆ.ಟಿ.ಪ್ರಕಾಶ್, ಮಧುಸೂಧನ್ ಸ್ನೇಹಿತರಾಗಿದ್ದು, ಚಳ್ಳಕೆರೆ ನಗರದಲ್ಲಿ ದಲ್ಲಾಲಿ ಮಂಡಿಗೆ ಹೋಗಿ ಮೆಕ್ಕೆಜೋಳ ಮಾರಾಟದ ಪಟ್ಟಿಪಡೆದು ಡಿ.೬ರ ರಾತ್ರಿ

ಚಳ್ಳಕೆರೆಯಿಂದ ಕಾಲುವೇಹಳ್ಳಿಗೆ ಬರುವ ಸಂದರ್ಭದಲ್ಲಿ ವಿಶ್ವೇಶ್ವರಪುರ ಬಳಿ ಇರುವ ಸೋಲಾರ್ ಪ್ಲಾಂಟ್ ಬಳಿ ಬೈಕ್ ಕಂಬಕ್ಕೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುತ್ತಾರೆ ಎಂದು ದೂರು ನೀಡಿರುತ್ತಾನೆ. ವೃತ್ತ ನಿರೀಕ್ಷಕ ಕೆ.ಕುಮಾರ್ ಪ್ರಕರಣದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ.

