Ad imageAd image

ಕಾರು ಬಸ್ ಮಧ್ಯ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಸಾಗರ ತಾಲೂಕಿನ ಆನಂದಪುರಂ ಸಮೀಪದ ಮುರುಘಾಮಠ ಹತ್ತಿರ ಕಾರು ಹಾಗೂ ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು
, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಶಿವಮೊಗ್ಗದಿಂದ ಸಾಗರದ ಕಡೆ ತೆರಳುತ್ತಿದ್ದ ಎರ್ಟಿಗಾ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಇದರಿಂದ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕಾರಿನಲ್ಲಿದ್ದವರು ದೊಡ್ಡಬಳ್ಳಾಪುರ ಮೂಲದವರು.

ಮೃತರನ್ನು ಅಕ್ಷಯ್​(28) ಹಾಗೂ ಶರಣ್ (26) ಎಂದು ಗುರುತಿಸಲಾಗಿದೆ. ಮೃತರು ದೊಡ್ಡಬಳ್ಳಾಪುರದಿಂದ ಹೊನ್ನಾವರಕ್ಕೆ ಹೊರಟಿದ್ದರು. ಸ್ಥಳಕ್ಕೆ ಆನಂದಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

 

- Advertisement -  - Advertisement - 
Share This Article
error: Content is protected !!
";