ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
BLDE ಡೀಮ್ಡ್ ವಿಶ್ವವಿದ್ಯಾಲಯದ ಡಾ. ರಾಘವೇಂದ್ರ ಕುಲಕರ್ಣಿ ಹಾಗೂ ಡಾ. ಕುಸಾಲದಾಸ ಅವರು ವಿಶ್ವದ 2% ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ದೇಶಕ್ಕೆ, ರಾಜ್ಯಕ್ಕೆ ಹಾಗೂ ಬಸವನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ರಾಘವೇಂದ್ರ ಕುಲಕರ್ಣಿ ಅವರು ಔಷಧ ವಿಜ್ಞಾನ ಮತ್ತು ಪಾಲಿಮರ್ ಕ್ಷೇತ್ರ ಹಾಗೂ ಡಾ. ಕುಸಾಲದಾಸ ಅವರು ಶರೀರ ರಚನಾಶಾಸ್ತ್ರ ಕ್ಷೇತ್ರದಲ್ಲಿ ಕೈಗೊಂಡಿರುವ ಸಂಶೋಧನೆಯನ್ನು ಪರಿಗಣಿಸಿ ಈ ಸ್ಥಾನ ಲಭಿಸಿದೆ.
ಡಾ. ರಾಘವೇಂದ್ರ ಕುಲಕರ್ಣಿ ಅವರಿಗೆ ಸತತ 5ನೇ ಬಾರಿ ಮತ್ತು ಡಾ. ಕುಸಾಲದಾಸ ಅವರು ಸತತ 3ನೇ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದು ಹ್ಯಾಟ್ರಿಕ್ ಸಾಧಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ನಮ್ಮ ವಿಜ್ಞಾನಿಗಳ ಈ ಸಾಧನೆಯು ಯುವ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲಿದೆ. ಅವರ ಸಾಧನೆಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಪಯಣ ಹೀಗೆಯೇ ಉನ್ನತಮಟ್ಟಕ್ಕೇರಲಿ ಎಂಬುದು ನಮ್ಮೆಲ್ಲರ ಆಶಯ ಹಾಗೂ ಹಾರೈಕೆಯಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

