ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಸಾಸಲು ಹೋಬಳಿ ಉಜ್ಜನಿ ಬೀರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ತಿಕ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ದೇವರಿಗೆ ಅಭಿಷೇಕ ಮಾಡುವ ಮೊದಲು ದೇವಾಲಯ, ಶುಚಿಗೊಳಿಸಿ. ಬೀರಲಿಂಗೇಶ್ವರ ದೇವರಿಗೆ ನೈಸರ್ಗಿಕ ದ್ರವ್ಯಗಳಿಂದ ಸ್ನಾನ ಮಾಡಿಸಿ.
ಬಳಿಕ, ನೈವೇದ್ಯ ಮತ್ತು ಅಲಂಕಾರ ಇತರ ಪೂಜಾ ವಿಧಿಗಳನ್ನು ನಿರ್ವಹಿಸಿ ತದನಂತರ ಭಕ್ತರಿಗೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿಯೋಗ ಮಾಡಲಾಯಿತು. ಭಕ್ತರಿಂದ ಕಾಯಿ ಹಣ್ಣು ಅರ್ಪಿಸಿ ಧನ್ಯತೆ ಮೆರೆದರು.

