ಎಐ ತಂತ್ರಜ್ಞಾನದಿಂದ ರೈತರ ಭವಿಷ್ಯ ಉಜ್ವಲ: ಬಸವರಾಜ ಎಸ್.ಹೊರಟ್ಟಿ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಬೆನ್ನೆಲುಬಾದ ನಮ್ಮ ರೈತರು ಹಿಂದಿಗಿಂತ ಈಗ ಸುಧಾರಣೆಯಾಗಿದ್ದಾರೆ.  ಹೊಸ ಎಐ ತಂತ್ರಜ್ಞಾನ ರೈತರಿಗೆ ವರದಾನವಾಗಲಿ
, ಎಐ ರೈತರ ಭವಿಷ್ಯ ಉಜ್ವಲವಾಗಲು ಸಹಕಾರಿಯಾಗಬೇಕು.  ರೈತರ ಕುರಿತು ರಾಜ್ಯದ ಜನತೆಗೆ  ಮಾಹಿತಿಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಫಾರ್ಮಾಸಿ ಕ್ಷೇತ್ರದ ಕಾರ್ಯನಿರ್ವಹಣಾ ವ್ಯವಸ್ಥೆ ಹಾಗೂ ಎಐ ಮತ್ತು ಕ್ವಾಂಟಮ್ ಸಂಯೋಜನೆ ಮತ್ತು ಅದರ ಸ್ಪರ್ಧಾತ್ಮಕ ಲಾಭಗಳ ಕುರಿತ ಪುಸ್ತಕಗಳಬಿಡುಗಡೆ ಮಾಡಲಾಗಿದೆ ಎಂದು ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ ಎಸ್.ಹೊರಟ್ಟಿ ಅವರು ತಿಳಿಸಿದರು.

ವಿಧಾನೌಧದಲ್ಲಿ ಹಮ್ಮಿಕೊಂಡಿದ್ದ ರವಿಶಂಕರ್ ಅವರು ಬರೆದಿರುವ ಫಾರ್ಮಾಸಿ ಕ್ಷೇತ್ರದ ಕಾರ್ಯನಿರ್ವಹಣಾ ವ್ಯವಸ್ಥೆ ಹಾಗೂ ಎಐ ಮತ್ತು ಕ್ವಾಂಟಮ್ ಸಂಯೋಜನೆ ಮತ್ತು ಅದರ ಸ್ಪರ್ಧಾತ್ಮಕ ಲಾಭಗಳ ಕುರಿತ ಪುಸ್ತಕಗಳನ್ನು ಬಿಡುಗಡೆ ಮಾತನಾಡಿದ ಸಭಾಪತಿಗಳು, ನಮ್ಮಲ್ಲಿ ಕೂಲಿ ಕಾರ್ಮಿಕರು ಲಭ್ಯವಿಲ್ಲದ ಈ ಕಾಲದಲ್ಲಿ ರೈತರಿಗೆ ಈ ಹೊಸ ತಂತ್ರಜ್ಞಾನದಿಂದ ಅನುಕೂಲವಾಗಲಿದೆ ಎಂದರು.

- Advertisement - 

ಲೇಖಕರಾದ ಡಾ. ರವಿಶಂಕರ್ ಅವರು ಮಾತನಾಡಿ ಎಐ -ಚಾಲಿತ ಫಾರ್ಮಾ ಅನುವಂಶದಿಂದ ಮಾರುಕಟ್ಟೆಗೆ” ಎಂಬ ಪುಸ್ತಕವು ಕೃತಕ ಬುದ್ಧಿಮತ್ತೆ ಔಷಧಶಾಸ್ತ್ರ, ಮೌಲ್ಯ ಸರಪಳಿಯನ್ನು ಹೇಗೆ ಪುನರ್‍ಗಟ್ಟುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ ಎಂದರು.

ಲಕ್ಷ್ಯ ಗುರುತಿಸುವಿಕೆ ಮತ್ತು ಸೃಜನಾತ್ಮಕ ರಸಾಯನಶಾಸ್ತ್ರದಿಂದ ಪ್ರಿಕ್ಲಿನಿಕಲ್ ಮತ್ತು ಕ್ಲಿನಿಕಲ್ ಅಭಿವೃದ್ಧಿ, ಉತ್ಪಾದನೆ, ಸರಬರಾಜು ಸರಪಳಿ ಮತ್ತು ವಾಣಿಜ್ಯ ಕಾರ್ಯಗತಗೊಳಿಸುವಿಕೆ ಕುರಿತು ಏಳು ಭಾಗಗಳು ಮತ್ತು 24 ಅಧ್ಯಾಯಗಳಲ್ಲಿ ರಚಿಸಲಾಗಿದೆ.

- Advertisement - 

ಡೇಟಾ ಮೂಲಾಧಾರಗಳು, ಫೌಂಡೇಷನ್ ಮಾದರಿಗಳು, ಮಲ್ಟಿಮೋಡಲ್ ಮತ್ತು ಏಜೆಂಟಿಕ್ ಎಐ, ನಿಯಂತ್ರಣಶಾಸ್ತ್ರ, ನೈತಿಕತೆ ಮತ್ತು ಹೊಸ ಕಾರ್ಯನಿರ್ವಹಣಾ ಮಾದರಿಗಳನ್ನು ಒಟ್ಟಾರೆಯಾಗಿ ಫಾರ್ಮಾಸಿ ಕ್ಷೇತ್ರದ “ಎಐ ಕಾರ್ಯನಿರ್ವಹಣಾ ವ್ಯವಸ್ಥೆಯಲ್ಲಿ ವಿವರಿಸಲಾಗಿದೆ ಎಂದು ಹೇಳಿದರು.

 

Share This Article
error: Content is protected !!
";