ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ತವ್ಯದಲ್ಲಿ ನಿರ್ಲಕ್ಷೆ ತೋರುತ್ತಿರುವ ಹೊಸದುರ್ಗ ತಾಲ್ಲೂಕು ಮಲ್ಲಪ್ಪನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಉಮಾದೇವಿ ಟಿ. ಇವರನ್ನು ತಕ್ಷಣದಿಂದಲೆ ಸೇವೆಯಿಂದ ಅಮಾನತ್ತುಗೊಳಿಸುವಂತೆ ಬಂಜಾರ ಲಂಬಾಣಿ ಸಮಾಜದಿಂದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗೆ ಸೋಮವಾರ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಅಗೌರವ ತೋರುತ್ತಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ತಮ್ಮ ವ್ಯಾಪ್ತಿಯನ್ನು ಮೀರಿ ಅಧ್ಯಕ್ಷರ ವಿರುದ್ದ ಮತ್ತೊಂದು ಗುಂಪನ್ನು ಎತ್ತಿಕಟ್ಟಿ ಮಾನಸಿಕವಾಗಿ ಕಿರಿಕಿರಿಯುಂಟು ಮಾಡುತ್ತಿದ್ದಾರೆಂದು ಆಪಾದಿಸಿದ ಬಂಜಾರ ಲಂಬಾಣಿ ಸಮಾಜದವರು ಅಶಿಸ್ತಿನಿಂದ ನಡೆದುಕೊಳ್ಳುತ್ತಿರುವ ಉಮಾದೇವಿ ಟಿ.ರವರನ್ನು ಅಮಾನತ್ತುಗೊಳಿಸಿದ್ದರೆ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಬಂಜಾರ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್‌ಕುಮಾರ್, ಸಹ ಕಾರ್ಯದರ್ಶಿ ಪರಮೇಶ್‌ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕಲ್ಲವ್ವನಾಗತಿಹಳ್ಳಿ ವೀರಭದ್ರನಾಯ್ಕ, ಐಯನಹಳ್ಳಿ ರಮೇಶ್‌ನಾಯ್ಕ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಂಜಿಗಟ್ಟೆ ಉಮಾಪತಿ, ಬಂಜಾರ ಸಮಾಜದ ಉಪಾಧ್ಯಕ್ಷ ತಣಿಗೆಹಳ್ಳಿ ಪ್ರವೀಣ್‌ನಾಯ್ಕ, ತಿಪ್ಪೇಶ್‌ನಾಯ್ಕ, ಪ್ರಶಾಂತ್‌ನಾಯ್ಕ, ನಾಗರಾಜ್‌ನಾಯ್ಕ, ಐಯ್ಯನಹಳ್ಳಿ ನಟರಾಜ್ ಈ ಸಂದರ್ಭದಲ್ಲಿದ್ದರು.