ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ಕೂಡ್ಲಿಗಿ ಪಟ್ಟಣದಲ್ಲಿ ನಡೆದ 2024 ರಿಂದ 2029ರ ಅವಧಿಯ ಚುನಾವಣೆಯಲ್ಲಿ ಗ್ರೇಡ್ -1 ದೈಹಿಕ ಶಿಕ್ಷಣ ಶಿಕ್ಷಕರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಬಿ ಎಂ ಭರತೇಶ್ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ನಾಗಭೂಷಣ, ಸಂಘಟನಾ ಕಾರ್ಯದರ್ಶಿ ಬಸವೇಶಿ ಖಜಾಂಚಿ ಕಲೀಲ್ ಸಾಬ್ ಉಪಾಧ್ಯಕ್ಷರಾಗಿ ಎನ್ ಕರಿಬಸಪ್ಪ, ಮಹೇಂದ್ರ, ಜ್ಯೋತಿ, ಸಂಘದ ಎಲ್ಲಾ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಅದ್ದೂರಿಯಾಗಿ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರೇಡ್ -2 ಸಂಘದ ಅಧ್ಯಕ್ಷ ಚೆನ್ನಬಸಪ್ಪ, ಜಿಲ್ಲಾ ವಿಜಯನಗರದ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಎ ರಮೇಶ್, ತಾಲೂಕು ಘಟಕದ ಉಪಾಧ್ಯಕ್ಷ ಕೋಗಳಿ ಕೊಟ್ರೇಶ್, ಕರಿಬಸಪ್ಪ, ವೀರಣ್ಣ , ಕರಿ ಬಸವನ ಗೌಡ ಖಜಾಂಚಿ ಹಾಗೂ ಇನ್ನು ಹಲವಾರು ಪದಾಧಿಕಾರಿಗಳು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಶಿಧರ್, ತಾಲೂಕು ಪರಿವೀಕ್ಷಕರು ಭಾಗವಹಿಸಿದ್ದರು ಎಂದು ಸಿ.ಅರುಣ್ ಕುಮಾರ್ ತಿಳಿಸಿದ್ದಾರೆ.