ಹಿರಿಯೂರು ಟೌನ್ ಕೃಷಿ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-2025 ರಿಂದ 2030ರ ಅವಧಿಯ ಆಡಳಿತ ಮಂಡಳಿಗೆ 12 ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ ಎಂದು ಚುನಾವಣಾಧಿಕಾರಿ ಶಿವಮೂರ್ತಿ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಸಾಲಗಾರರ ಕ್ಷೇತ್ರದಲ್ಲಿ ಒಟ್ಟು 11 ಸ್ಥಾನಗಳಿದ್ದು ಆ ಎಲ್ಲ ಸ್ಥಾನಗಳು ಅವಿರೋಧ ಆಯ್ಕೆಯಾಗಿದೆವ. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಗುರುಸ್ವಾಮಿ, ಪ್ಯಾರೇಜಾನ್, ಎನ್.ಸುಬ್ರಮಣಿ, ಸಿ.ಹೆಂಜಾರಪ್ಪ, ಸಿ.ಸುಬ್ರಮಣಿ ಈ ಮಂದಿ ಸಾಲಗಾರ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದಾರೆ.

ಪರಿಶಿಷ್ಟ ಜಾತಿ ಮೀಸಲು ಸಾಲಗಾರ ಕ್ಷೇತ್ರದಿಂದ ಡಿ.ಸಣ್ಣಪ್ಪ, ಪರಿಶಿಷ್ಟ ಪಂಗಡ ಮೀಸಲು ಸಾಲಗಾರ ಕ್ಷೇತ್ರದಿಂದ ಎಚ್.ಎನ್.ವೆಂಕಟೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 ಹಿಂದುಳಿದ-ಎ ಮೀಸಲು ಸಾಲಗಾರ ಕ್ಷೇತ್ರದಿಂದ ಪಿ.ಎಸ್.ಸಾದತ್ ವುಲ್ಲಾ, ಹಿಂದುಳಿದ-ಬಿ ಮೀಸಲು ಸಾಲಗಾರ ಕ್ಷೇತ್ರದಿಂದ ವೈ.ಎಸ್.ಉಮಾಕಾಂತ್, ಮಹಿಳಾ ಮೀಸಲು ಸಾಲಗಾರ ಕ್ಷೇತ್ರದಿಂದ ಕೆ.ವಿ.ಗೌರಮ್ಮ, ನಾಗರತ್ನಮ್ಮ, ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಎನ್.ಪ್ರಕಾಶ್ ಕುಮಾರ್ ಸೇರಿ 12 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿದ್ಯುಕ್ತವಾಗಿ ಚುನಾಯಿತರಾಗಿದ್ದಾರೆಂದು ಘೋಷಿಸಿದ್ದಾರೆ.

 

 

 

 

Share This Article
error: Content is protected !!
";